ಶಿವಮೊಗ್ಗ (shivamogga), ಮಾರ್ಚ್ 20: ಶಿವಮೊಗ್ಗದ ತ್ಯಾವರೆಕೊಪ್ಪ ಲಯನ್ ಸಫಾರಿ (ಹುಲಿ – ಸಿಂಹಾಧಾಮ) ಯಲ್ಲಿ ಮಾರ್ಚ್ 19 ರ ರಾತ್ರಿ, ಚಿಕಿತ್ಸೆ ಮಾಡುವ ವೇಳೆಯೇ ನೀರು ಕುದುರೆ ದಾಳಿಯಿಂದ ಮೃತಪಟ್ಟ, ಯುವ ಪಶು ವೈದ್ಯೆ ಸಮೀಕ್ಷಾ ರೆಡ್ಡಿ (27) ರವರ ಸಾವಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅರಣ್ಯ ಸಚಿವರು ಹೇಳಿದ್ದೇನು? : ಸಮೀಕ್ಷಾ ರೆಡ್ಡಿರವರ ಸಾವಿನ ಕುರಿತಂತೆ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ. ‘ಅರಣ್ಯಾಧಿಕಾರಿಗಳ ತಂಡವು ಕೂಲಂಕುಷವಾಗಿ ತನಿಖೆ ನಡೆಸಲಿದೆ. ಘಟನೆ ಸಂಭವಿಸಲು ಕಾರಣಗಳೇನು? ಸುರಕ್ಷತಾ ಲೋಪಗಳಾಗಿವೆಯೇ? ಎಂಬುವುದರ ಬಗ್ಗೆ ವಿವರ ಕಲೆ ಹಾಕಲಾಗುವುದು. ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ’ ಸೂಚಿಸಿದ್ದಾರೆ.

ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು (SOP) ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ವನ್ಯಜೀವಿಗಳ ಹತ್ತಿರ ಹೋಗುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ಸರ್ಕಾರದಿಂದ ದೊರಕಬಹುದಾದ ಪರಿಹಾರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು? : ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀರಾನೆ ದಾಳಿಯಿಂದ ಯುವ ಪಶುವೈದ್ಯ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ತಮ್ಮ ವೃತ್ತಿ ಬದುಕನ್ನು ವನ್ಯಜೀವಿಗಳ ಸೇವೆಗೆ ಮುಡಿಪಾಗಿಟ್ಟ ಯುವ ವೈದ್ಯಯನ್ನು ಕಳೆದುಕೊಂಡಿರುವುದು ಕೇವಲ ಅವರ ಕುಟುಂಬ ಮತ್ತು ಇಲಾಖೆಗೆ ನಷ್ಟವಲ್ಲದೆ ಇಡೀ ಸಮಾಜಕ್ಕೆ ಆದ ನಷ್ಟ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸರ್ಕಾರ ನಿಲ್ಲಲಿದ್ದು, ಈಗಾಗಲೇ ಅರಣ್ಯ ಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರ ಎಂದು ಹೇಳಿದ್ದಾರೆ.
ಸಮೀಕ್ಷಾ ರೆಡ್ಡಿ ಅವರ ಕುಟುಂಬಕ್ಕೆ ಹಾಗೂ ಅವರ ಸಹಪಾಠಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಚಿವ ಮಧು ಬಂಗಾರಪ್ಪರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಪ್ರಕಟಣೆಯೇನು?: ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಗರ್ಭಿಣಿ ನೀರು ಕುದುರೆಯನ್ನು ಪರೀಕ್ಷಿಸಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ನೀರುಕುದುರೆ ಆಕಸ್ಮಿಕವಾಗಿ ದಾಳಿ ನಡೆಸಿತ್ತು. ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 20 ರ ಬೆಳಿಗ್ಗೆ 6.30 ಕ್ಕೆ ಮೃತಪಟ್ಟಿದ್ದಾರೆ.
ಡಾ.ಸಮೀಕ್ಷಾ ರೆಡ್ಡಿರವರು ಪಶು ವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ಅವರು ಮಾ.19 ರಂದು ರಾತ್ರಿ 10.30 ಕ್ಕೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಸನ್ ಕೊನ್ಯೂರ್ ಪಕ್ಷಿಗೆ ಫಾಲೊ ಅಪ್ ಚಿಕಿತ್ಸೆ ನೀಡಿದ್ದರು.
ನಂತರ ರಾತ್ರಿ 11.45 ಕ್ಕೆ ಥರ್ಮಲ್ ಕ್ಯಾಮೆರಾ ಬಳಸಿ ಗರ್ಭಿಣಿ ನೀರು ಕುದರೆಯ (ಹಿಪ್ಪೊಪೊಟಮಸ್) ತಾಪಮಾನ ಪರೀಕ್ಷಿಸುವ ವೇಳೆ ನೀರುಕುದುರೆ ದಾಳಿ ನಡೆಸಿತ್ತು ಎಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ನಿಯಮಗಳ ಪಾಲನೆ ಮಾಡಲಾಗಿದೆಯೇ?
*** ಸಮೀಕ್ಷಾ ರೆಡ್ಡಿ ಸಾವಿನ ಕುರಿತಂತೆ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಲಾಗಿದೆ. ಅವರು ನೀರು ಕುದುರೆಗೆ ಚಿಕಿತ್ಸೆ ನೀಡಲು ಮುಂದಾದ ವೇಳೆ, ಸಂಬಂಧಿಸಿದವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡಿರಲಿಲ್ಲವೆಂಬ ದೂರುಗಳು ಕೇಳಿಬರಲಾರಂಭಿಸಿವೆ.
ನಿಯಮಗಳೇನು? : ಕಾಡು ಪ್ರಾಣಿಗಳಿಗೆ ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು. ಒಂದು ವೇಳೆ ನೀಡಿದರು ಕೂಡ ಅರವಳಿಕೆ ಚುಚ್ಚುಮದ್ದನ್ನು ನೀಡಿ ನೀಡಬೇಕು. ಜೊತೆಗೆ ಒಂದಷ್ಟು ಜನ ಸಿಬ್ಬಂದಿಗಳು ಇರಬೇಕು. ಪಟಾಕಿ ಇರಬೇಕು. ಏರ್ ಫೈರ್ ಗನ್ ಇರಬೇಕು.
ಆದರೆ ಸಮೀಕ್ಷಾ ರೆಡ್ಡಿ ಅವರು ನೀರು ಕುದುರೆಗೆ ಚಿಕಿತ್ಸೆ ಮಾಡಲು ಹೋದ ವೇಳೆ ಎಸ್ಓಪಿಗಳ ಪಾಲನೆ ಮಾಡಿಲ್ಲವೆಂಬ ಮಾಹಿತಿಗಳು ಕೇಳಿಬರುತ್ತಿವೆ. ಈ ಕುರಿತಂತೆ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
Shivamogga Lion Safari Tragedy: What Ministers Said, What Forest Department Released
Shivamogga, March 20: At the Tyavarekoppa Lion Safari (Tiger–Lion Reserve) in Shivamogga, on the night of March 19, young veterinarian Samiksha Reddy (27) died after being attacked by a hippopotamus while giving treatment. Forest Minister Eshwar Khandre and District In‑Charge Minister Madhu Bangarappa expressed condolences.
What did the Forest Minister say? Regarding the death of Samiksha Reddy, Minister Eshwar Khandre ordered an investigation. He said: “A team of forest officials will conduct a thorough investigation. What were the reasons for the incident? Were there safety lapses? Details will be collected. Forest officials have been instructed to submit a report within 7 days.”
He directed that the Standard Operating Procedure (SOP) for treating wild animals must be made mandatory in all zoos of the state. Doctors and staff must exercise greater caution when approaching wild animals.
The minister also instructed officials to provide compensation to the deceased veterinarian’s family as per government rules.
What did the District In‑Charge Minister say? Minister Madhu Bangarappa said: “It is very painful that young veterinarian Dr. Samiksha Reddy died due to a hippopotamus attack while giving treatment at the Tyavarekoppa zoo. Losing a young doctor who dedicated her career to the service of wildlife is not only a loss to her family and the department but also to society as a whole. In such a situation, the government will stand with her family. Already, the Forest Minister has ordered a high‑level investigation.” He added: “May God give strength to Samiksha Reddy’s family and her classmates to bear this grief.”
What did the Forest Department release? At the Tyavarekoppa Tiger–Lion Reserve in Shivamogga, veterinarian Dr. Samiksha Reddy had gone to examine a pregnant hippopotamus. The hippopotamus suddenly attacked her.
She was admitted to Max Super Specialty Hospital, Shivamogga. She underwent surgery but the treatment was not successful, and she died at 6:30 AM on March 20.
Dr. Samiksha Reddy had been appointed as a veterinary officer and was undergoing training under zoo veterinarians. On March 19 at 10:30 PM, she had gone to the zoo hospital to give follow‑up treatment to a Sun Conure bird.
Later, at 11:45 PM, while using a thermal camera to check the temperature of the pregnant hippopotamus, the animal attacked her — according to the Deputy Conservator of Forests and the Executive Director of the reserve.

