BREAKING NEWS | ಆಟವಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗಿ ಶಿವಮೊಗ್ಗ ಮೂಲದ ಕ್ರಿಕೆಟಿಗ ಎಸ್ ಎಲ್ ಅಕ್ಷಯ್ ವಿಧಿವಶ!

Cricketer S. L. Akshay from Shivamogga passes away due to heart attack while playing!ಆಟವಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗಿ ಶಿವಮೊಗ್ಗ ಮೂಲದ ಕ್ರಿಕೆಟಿಗ ಎಸ್ ಎಲ್ ಅಕ್ಷಯ್ ವಿಧಿವಶ!

ಬೆಂಗಳೂರು / ಶಿವಮೊಗ್ಗ, ಮೇ 24: ಕ್ರಿಕೆಟ್ ಆಟವಾಡುವಾಗಲೇ ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ರಣಜಿ ಆಟಗಾರ ಎಸ್ ಎಲ್ ಅಕ್ಷಯ್ (39) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರು ಮೂಲತಃ ಶಿವಮೊಗ್ಗದವರಾಗಿದ್ದಾರೆ.

ಮೇ 24 ರಂದು ಬೆಂಗಳೂರಿನ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ ಕೆಎಸ್’ಸಿಎ 3 ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ಅಕ್ಷಯ್ ಆಟವಾಡುತ್ತಿದ್ದರು. 4 ಓವರ್ ಔಲಿಂಗ್ ಮಾಡಿದ್ದರು. ಆಟವಾಡುತ್ತಿದ್ದ ವೇಳೆಯೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಈ ಹಿನ್ನೆಲೆಯಲ್ಲಿ ಅಕ್ಷಯ್ ಅವರು ಮೈದಾನದಿಂದ ಪೆವಿಲಿಯನ್ ಗೆ ನಿರ್ಗಮಿಸಿದ್ದಾರೆ. ಬಳಿಕ ನೀರು ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಷಯ್ ಅವರು ಕರ್ನಾಟಕದ ಪರ 6 ರಣಜಿ, 3 ಏಕದಿನ ಪಂದ್ಯಗಳನ್ನಾಡಿದ್ದರು. ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಕ್ಲಬ್‌ನ ಆಟಗಾರರಾಗಿದ್ದರು. ಮಧ್ಯಮ ವೇಗದ ಬೌಲರ್ ಆಗಿದ್ದರು. ಜೊತೆಗೆ ಉತ್ತಮ ಬ್ಯಾಟರ್ ಆಗಿಯೂ ಗಮನ ಸೆಳೆದಿದ್ದರು.  ಸದ್ಯ ಕರ್ನಾಟಕ ಅಂಡರ್-19 ಕ್ರಿಕೆಟ್ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

Cricketer S. L. Akshay from Shivamogga passes away due to heart attack while playing!

Bengaluru / Shivamogga, May 24: Former Karnataka Ranji cricketer S. L. Akshay (39), originally from Shivamogga, tragically passed away after suffering a heart attack while playing cricket.

On May 24, Akshay was participating in a KSCA 3rd Division League match. He had bowled 4 overs. While still on the field, he began to feel unwell.

Following this, Akshay walked back to the pavilion. As he was drinking water, he suddenly collapsed. He was immediately rushed to the hospital by vehicle, but unfortunately, he passed away on the way.

Akshay had represented Karnataka in 6 Ranji Trophy matches and 3 one-day games. He was a player for the Durgigudi Cricket Club in Shivamogga. Known as a medium-pace bowler, he also impressed as a capable batter. At the time of his passing, he was serving as the coach of the Karnataka Under-19 cricket team.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *