ಸಾಗರ (sagara), ನವೆಂಬರ್ 20: ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪದ ಮೇರೆಗೆ, ದಾವಣಗೆರೆ ಜಿಲ್ಲೆಯ ಓರ್ವನನ್ನು ಸಾಗರ ತಾಲೂಕು ಆನಂದಪುರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆ ನಿವಾಸಿ ಚಂದನ ಯಾನೆ ಚಾಂದು ಯಾನೆ ಚಾಂದ್ ಪೀರ್ ಯಾನೆ ಮೊಹಮ್ಮದ್ ಯೂನಸ್ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ನವೆಂಬರ್ 20 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಆರೋಪಿಯು ವಿವಿಧೆಡೆ 10 ಕ್ಕೂ ಅಧಿಕ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಜೊತೆಗೆ ಶಿಕ್ಷೆಗೂ ಗುರಿಯಾಗಿದ್ದ ಎಂದು ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದ ಹಿನ್ನೆಲೆ : 01-09-2026 ರ ರಾತ್ರಿ 10-30 ಗಂಟೆಯಿಂದ 02-09-2026 ರಂದು ಬೆಳಿಗ್ಗೆ 6 ಗಂಟೆಯ ನಡುವೆ, ಸಾಗರ ತಾಲೂಕು ಯಡೇಹಳ್ಳಿ ರಥಬೀದಿಯಲ್ಲಿರುವ ಪ್ರದೀಪ್ ಎಂಬುವರ ಬಾಡಿಗೆ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು.
ಕಿಟಕಿಯ ಮೂಲಕ ಮನೆಯ ಬಾಗಿಲು ತೆರೆದು ಬೀರುವಿನಲ್ಲಿದ್ದ 12 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Sagara: Accused arrested for stealing gold jewellery worth Rs 12 lakh from a house! | Shivamogga, November 20: The Anandapura police in Sagara taluk have arrested a man from Davanagere district on charges of stealing gold jewellery worth several lakh rupees from a house.

