ಶಿವಮೊಗ್ಗ (shivamogga), ಮೇ 25: ಶಿವಮೊಗ್ಗದ ಶಾಯಿ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಯೋರ್ವರ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂ. ವಹಿವಾಟು ನಡೆಸಿದ್ದ ಆರೋಪದ ಮೇರೆಗೆ, ಬೆಂಗಳೂರಿನ ವ್ಯಕ್ತಿಯೋರ್ವರನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣ ಸಮೀಪದ ನಿವಾಸಿ ಅಂಕಿತ್ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಆರೋಪಿಯು ಸಾಯಿ ಗಾರ್ಮೆಂಟ್ಸ್ ನ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯನ್ನು ಮೋಸದಿಂದ ಪಡೆದು, ‘ಮ್ಯೂಲ್ ಅಕೌಂಟ್’ ಆಗಿ ಬಳಕೆ ಮಾಡಿ ವಂಚಿಸಿದ ಕುರಿತಂತೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಇನ್ಸ್’ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ. ಈತನಿಂದ 3 ಮೊಬೈಲ್ ಪೋನ್, 4 ಎಟಿಎಂ ಕಾರ್ಡ್, 4 ಬ್ಯಾಂಕ್ ಅಕೌಂಟ್ ಗಳ ವಿವರಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಮ್ಯೂಲ್ ಬ್ಯಾಂಕ್ ಅಕೌಂಟ್ ಗಳ ಮೂಲಕ 32,43,000 ರೂ. ಗಳಿಗೂ ಹೆಚ್ಚು ನಗದು ವರ್ಗಾವಣೆಗೊಳಿಸಿದ್ದ ವಿವರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga Garments Woman Employee’s Bank Account Misused: Bengaluru Accused Arrested!
Shivamogga, May 25: A man from Bengaluru has been arrested by the Cyber Crime Police for allegedly misusing the bank account of a female employee of Sai Garments in Shivamogga and conducting transactions worth lakhs of rupees. The district police department issued a press release with this information.
The accused has been identified as Ankit (34), a resident near HAL Airport, Bengaluru. He has been remanded to judicial custody. According to the police, Ankit fraudulently obtained the bank account details of the Sai Garments employee and used it as a “mule account” for cheating. A case was registered at the Shivamogga Cyber Crime Police Station.
Under the leadership of Inspector Manjunath, the police team successfully arrested the accused. From him, they seized 3 mobile phones, 4 ATM cards, and details of 4 bank accounts. Investigations revealed that the accused had transferred more than ₹32,43,000 in cash through mule bank accounts, the police department stated in its release.

