shimoga news | ಶಿಕಾರಿಪುರ : ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

Shikaripura: Mother missing with two children – Police seek public help in tracing them ಶಿಕಾರಿಪುರ : ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

 ಶಿವಮೊಗ್ಗ (shivamogga), ಜೂನ್ 19 : ಇಬ್ಬರು ಮಕ್ಕಳೊಂದಿಗೆ ತಾಯಿಯೋರ್ವಳು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ.

ನವೀನ್ ಕುಮಾರ್ ಎಂಬುವವರ ಅಕ್ಕ ನಾಗವೇಣಿ (31), ಮಕ್ಕಳಾದ ಅಶ್ವತ್ (14) ಹಾಗೂ ಅಶ್ವಿನ್ (12) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯು ಜೂನ್ 19 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಜೂನ್ 17 ರಂದು ತಾಯಿಯು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರ ಹೋದವರು, ಇಲ್ಲಿಯವರೆಗೂ ವಾಪಾಸ್ಸಾಗಿಲ್ಲ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಚಹರೆ : ನಾಗವೇಣಿಯವರು 5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಬಿಳಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾರೆ.

ಬಾಲಕ ಅಶ್ವತ್‌ನ 4 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾನೆ.

ಬಾಲಕ ಅಶ್ವಿನ್‌ 3 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಎಣ್ಣೆಗಪ್ಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪುಬಣ್ಣದ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿರುತ್ತಾನೆ.

ತಾಯಿ ಮಕ್ಕಳ ಬಗ್ಗೆ ಸುಳಿವು ಇದ್ದಲ್ಲಿ ದೂರವಾಣಿ ಸಂಖ್ಯೆ: ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ನಂ:-08182- 261413,ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ ಶಿಕಾರಿಪುರ:-08187-222443/ 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443/ 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shikaripura: Mother missing with two children – Police seek public help in tracing them

Shivamogga, June 19: A woman has gone missing along with her two children in Haraguvalli village of Shikaripura taluk, Shivamogga district.

The missing persons have been identified as Naveen Kumar’s sister, Nagaveni (31), and her children Ashwath (14) and Ashwin (12), according to a press release issued by the police department on June 19.

On June 17, the mother left home with her two children and has not returned since.

Description:

  • Nagaveni: 5 feet tall, medium build, fair complexion, round face, speaks Kannada. At the time of leaving home, she was wearing a pink top, white pants, and a veil.
  • Ashwath: 4 feet tall, medium build, dark complexion, round face, speaks Kannada. He was wearing a white shirt and black pants.
  • Ashwin: 3 feet tall, medium build, dark complexion, round face, speaks Kannada. He was wearing a black shirt and blue pants.

Police have appealed to the public to provide any information about the missing mother and children.

Contact numbers for information:

  • Shivamogga District Police Office: 08182-261413
  • DSP Shikaripura Sub-Division: 08187-222443 / 9480803323
  • PI Shikaripura Rural Police Station: 08187-222443 / 9480803366

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *