shimoga news | ಶಿವಮೊಗ್ಗ : ನಡು ರಸ್ತೆಯಲ್ಲಿಯೇ ಅಜ್ಜಿಯನ್ನೇ ಕೊಂದಿದ್ದ ಗಾಂಜಾ ವ್ಯಸನಿ ಮೊಮ್ಮಗನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!

Shimoga: Police Shoot and Arrest Grandson Who Killed His Grandmother in Broad Daylight shimoga news | ಶಿವಮೊಗ್ಗ : ನಡು ರಸ್ತೆಯಲ್ಲಿಯೇ ಅಜ್ಜಿಯನ್ನೇ ಕೊಂದಿದ್ದ ಗಾಂಜಾ ವ್ಯಸನಿ ಮೊಮ್ಮಗನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!

ಶಿವಮೊಗ್ಗ (shivamogga), ಜುಲೈ 02: ಅಜ್ಜಿಯನ್ನೇ ಕೊಂದು ಪರಾರಿಯಾಗಿದ್ದ ಗಾಂಜಾ ವ್ಯಸನಿ ಮೊಮ್ಮಗನನ್ನು, ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ, ಜುಲೈ 2 ರ ಬೆಳಿಗ್ಗೆ ನಗರದ ಹೊರವಲಯ ವಾಜಪೇಯಿ ಲೇಔಟ್ ಬಳಿ ನಡೆದಿದೆ.

ಕಿಶೋರ (26) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿಯು ವಾಜಪೇಯಿ ಬಡಾವಣೆಯಲ್ಲಿ ಅಡಗಿಕೊಂಡಿರುವ ಖಚಿತ ಮಾಹಿತಿ ಆಧಾರದ ಮೇಲೆ, ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿ ಗಣೇಶ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ  ಇನ್ಸ್’ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ನಿಖಿಲ್ ಬಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಆರೋಪಿ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜ್ಜಿಯನ್ನೇ ಕೊಂದಿದ್ದ ಆರೋಪಿ..!

*** ಶಿವಮೊಗ್ಗದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯ ನಿವಾಸಿಯಾದ ಆರೋಪಿ ಕಿಶೋರ್ ಗಾಂಜಾ ವ್ಯಸನಿಯಾಗಿದ್ದ. ಮೊಮ್ಮಗನ ಗಾಂಜಾ ವ್ಯಸನದ ವಿರುದ್ದ ಅಜ್ಜಿ ಸುಶೀಲಮ್ಮ (65) ರವರು ಜುಲೈ 1 ರ ಸಂಜೆ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದರು. ಈ ವೇಳೆ ಆಕ್ರೋಶಗೊಂಡ ಆರೋಪಿಯು ನಡು ರಸ್ತೆಯಲ್ಲಿಯೇ ಅಜ್ಜಿ ತಲೆಯ ಮೇಲೆ ಸೈಜ್ ಕಲ್ಲೊಂದನ್ನು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shimoga: Police Shoot and Arrest Grandson Who Killed His Grandmother in Broad Daylight | Shimoga, July 02: In a shocking incident, a drug-addicted grandson who had murdered his grandmother and fled was shot in the leg and arrested by the Shimoga Doddapete police. The incident took place on the morning of July 2 near Vajpayee Layout on the outskirts of the city.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *