ಶಿವಮೊಗ್ಗ (shivamogga) ಜುಲೈ 16: ಶಿವಮೊಗ್ಗ ನಗರದಲ್ಲಿ ಅರ್ಹತಾ ಪತ್ರ (ಎಫ್ ಸಿ) ನವೀಕರಿಸದೆ ನಿಯಮಬಾಹಿರವಾಗಿ ಸಂಚರಿಸುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್’ಟಿಓ) ಎಚ್ಚರಿಕೆ ನೀಡಿದ್ದಾರೆ.
ದಿನಾಂಕ 15-07-2026 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರ್ಹತಾ ಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋರಿಕ್ಷಾಗಳ ಚಾಲಕರು ಅಥವಾ ಮಾಲೀಕರು ತಕ್ಷಣವೇ ಸಂಬಂಧಪಟ್ಟ ಸಾರಿಗೆ ಕಛೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿ ವಿನಂತಿಸಲಾಗಿದೆ. ತದನಂತರ, ತಮ್ಮ ವಾಹನಗಳನ್ನು ಮಲವಗೊಪ್ಪದ ಡ್ರೈವಿಂಗ್ ಟ್ರ್ಯಾಕ್‌ನಲ್ಲಿ ಹಾಜರುಪಡಿಸಿ, ಅರ್ಹತಾ ಪತ್ರವನ್ನು ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.
ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜುಲೈ 16 ರಂದು ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ಆರ್’ಟಿಓ ಅವರು ಮಾಹಿತಿ ನೀಡಿದ್ದಾರೆ.
Shivamogga – Legal action against autorickshaws without FC renewal: RTO warns | Shivamogga July 16: The Regional Transport Officer (RTO) has warned that strict legal action will be taken against autorickshaws plying illegally in Shivamogga city without renewing their FC.

