shimoga | malnad rain news | ಮಲೆನಾಡಲ್ಲಿ ಮಳೆ ಚುರುಕು : ಚಕ್ರಾದಲ್ಲಿ 210 ಮಿ.ಮೀ. ಮಳೆ!

rain news

ಶಿವಮೊಗ್ಗ (shivamogga), ಆಗಸ್ಟ್ 01 : ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ಪ್ರಮುಖ್ಯ ಡ್ಯಾಂಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ.

ಆಗಸ್ಟ್ 01 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಆಗುಂಬೆಯಲ್ಲಿ 260 ಮಿ.ಮೀ.  ಹಾಗೂ ಚಕ್ರಾದಲ್ಲಿ 210 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ. ಮಾಣಿಯಲ್ಲಿ 171 ಮಿ.ಮೀ., ಯಡೂರು 121 ಮಿ.ಮೀ., ಹುಲಿಕಲ್ 127 ಮಿ.ಮೀ., ಮಾಸ್ತಿಕಟ್ಟೆ 160 ಮಿ.ಮೀ., ಸಾವೇಹಕ್ಲುವಿನಲ್ಲಿ 194 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗದಲ್ಲಿ 12.10 ಮಿ.ಮೀ., ಭದ್ರಾವತಿ 9.60 ಮಿ.ಮೀ., ತೀರ್ಥಹಳ್ಳಿ 98 ಮಿ.ಮೀ., ಸಾಗರ 52.70 ಮಿ.ಮೀ., ಶಿಕಾರಿಪುರ 26.40 ಮಿ.ಮೀ., ಸೊರಬ 48.90 ಮಿ.ಮೀ.  ಹಾಗೂ ಹೊಸನಗರದಲ್ಲಿ 80.60 ಮಿ.ಮೀ. ಮಳೆಯಾಗಿದೆ.

ವಿವರ : ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1777.95 (ಗರಿಷ್ಠ ಮಟ್ಟ : 1819) ಅಡಿಯಿದೆ. 38,183 ಕ್ಯೂಸೆಕ್ ಒಳಹರಿವಿದ್ದು, 2032 ಕ್ಯೂಸೆಕ್ ಹೊರಹರಿವಿದೆ.

ಭದ್ರಾ ಡ್ಯಾಂ ನೀರಿನ ಮಟ್ಟ 157 ಅಡಿ 3 ಇಂಚು ಇದೆ (ಗರಿಷ್ಠ ಮಟ್ಟ : 186) ಅಡಿಯಿದೆ. 12983 ಕ್ಯೂಸೆಕ್ ಒಳಹರಿವಿದ್ದು, 182 ಕ್ಯೂಸೆಕ್ ಹೊರಹರಿವಿದೆ.

ಉಳಿದಂತೆ ತುಂಗಾ ಡ್ಯಾಂ ಕಳೆದ ಹಲವು ವಾರಗಳ ಹಿಂದೆಯೇ ಗರಿಷ್ಠ ಮಟ್ಟ ತಲುಪಿದ್ದು, ಪ್ರಸ್ತುತ 55,197 ಕ್ಯೂಸೆಕ್ ಒಳಹರಿವಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

Monsoon Rains Intensify in Malnad: 210 mm in Chakrat!

Shimoga, August 01: The monsoon has picked up pace in the Malnad region. Heavy rains are lashing the Western Ghats areas, leading to a rise in river flows and increased inflows into major dams.

As of 8 AM on August 01, in the past 24 hours, Chakrat recorded 210 mm of rainfall. Other areas saw significant rain too: Mani (171 mm), Yadur (121 mm), Hulikal (127 mm), Mastikatte (160 mm), and Savehaklu (194 mm).

Elsewhere in the district: Shimoga (12.10 mm), Bhadravati (9.60 mm), Tirthahalli (98 mm), Sagar (52.70 mm), Shikaripura (26.40 mm), Sorab (48.90 mm), and Hosanagar (80.60 mm).

Dam Levels and Inflows

  • Linganamakki Dam: Water level at 1777.95 ft (Max: 1819 ft). Inflow: 38,183 cusecs; Outflow: 2,032 cusecs.
  • Bhadra Dam: Water level at 157 ft 3 in (Max: 186 ft). Inflow: 12,983 cusecs; Outflow: 182 cusecs.
  • Tunga Dam: Already at maximum level for several weeks. Current inflow: 55,197 cusecs, with equal outflow.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *