shimoga railway coaching depo | ಶಿವಮೊಗ್ಗ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ಅಂತಿಮ ಹಂತಕ್ಕೆ : ಶೀಘ್ರದಲ್ಲಿಯೇ ಎಕ್ಸ್‌ಪ್ರೆಸ್ ರೈಲುಗಳ ನಿರ್ವಹಣೆ!

shimoga railway - train news

ನವದೆಹಲಿ, ಆಗಸ್ಟ್ 05: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮಲೆನಾಡಿನ ರೈಲು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ, ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾದ ಶಿವಮೊಗ್ಗ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ವೇಗವಾಗಿ ಸಾಗಿದೆ ಎಂದು ಲೋಕಸಭೆ ಅಧಿವೇಶೆನದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಒಟ್ಟು 76.01 ಕೋಟಿ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿರುವ ಈ ಯೋಜನೆಗೆ, ಸಂಸದ ರಾಘವೇಂದ್ರ ಅವರ ನಿರಂತರ ಪರಿಶ್ರಮದ ಫಲವಾಗಿ ಮಾರ್ಚ್ 31, 2026ರವರೆಗೆ 58.82 ಕೋಟಿ ರೂ.ಗಳಷ್ಟು ಕಾಮಗಾರಿಗಳನ್ನು ಮುಗಿಸಿ, ಶೇ. 77% ಕ್ಕಿಂತ ಹೆಚ್ಚು ಹಣಕಾಸು ಪ್ರಗತಿ ಸಾಧಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯ, ಪ್ರಸಕ್ತ ಸಾಲಿನಲ್ಲಿ 9.5 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ.

ಯೋಜನೆಯ ಹೈಲೈಟ್ಸ್ ಗಳು: ಪೂರ್ಣಗೊಂಡಿರುವ ಕಾಮಗಾರಿಗಳು: ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ (Station Building) ಹಾಗೂ ಸೇವಾ ಕಟ್ಟಡ (Service Building) ನಿರ್ಮಾಣ ಕಾರ್ಯ; ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್‌ನ ಪಾಯದ (Foundation) ಕಾಮಗಾರಿ ಪೂರ್ಣಗೊಂಡಿದೆ.

ಚಾಲನೆಯಲ್ಲಿರುವ ಕಾಮಗಾರಿಗಳು: 24 ಬೋಗಿಗಳ ಸುಸಜ್ಜಿತ ರೈಲುಗಳನ್ನು ತಪಾಸಣೆ ಮಾಡುವ 2 ಫಿಟ್ ಲೈನ್‌ಗಳು (Pit Lines), 2 ಸ್ಟೇಬ್ಲಿಂಗ್ ಲೈನ್‌ಗಳು (Stabling Lines), 1 ಲೂಪ್ ಲೈನ್ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ.

ಭೂಸ್ವಾಧೀನ ಪ್ರಕ್ರಿಯೆ: ಯೋಜನೆಗೆ ಅಗತ್ಯವಿರುವ ಒಟ್ಟು 38 ಎಕರೆ ಭೂಮಿಯಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಶಂಟಿಂಗ್ ನೆಕ್‌ಗೆ ಅಗತ್ಯವಿರುವ ಬಾಕಿ 6.7 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರವೇ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ.

ಶಿವಮೊಗ್ಗಕ್ಕೆ ಆಗಮಿಸಲಿವೆ ವಂದೇ ಭಾರತ್ ರೈಲುಗಳು…!

*** ಶಿವಮೊಗ್ಗ ರೈಲ್ವೆ ಕೋಚಿಂಗ್ ಡಿಪೋ ಯೋಜನೆ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ.ರಾಘವೇಂದ್ರ, “ಕೋಟೆಗಂಗೂರು ಕೋಚಿಂಗ್ ಡಿಪೋ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ದಶಕಗಳ ಕನಸಾಗಿದೆ. ಈ ಡಿಪೋ ನಿರ್ಮಾಣಗೊಂಡ ನಂತರ ಶಿವಮೊಗ್ಗ ಸ್ವತಂತ್ರ ರೈಲ್ವೆ ಹಬ್ ಆಗಿ ಹೊರಹೊಮ್ಮಲಿದೆ.

24 ಬೋಗಿಗಳ ರೈಲುಗಳ ನಿರ್ವಹಣೆ ಇಲ್ಲೇ ಸಾಧ್ಯವಾಗುವುದರಿಂದ, ಬೆಂಗಳೂರು ಅಥವಾ ಮೈಸೂರು ನಗರಗಳನ್ನು ನೆಚ್ಚಿಕೊಳ್ಳದೇ ಶಿವಮೊಗ್ಗದಿಂದಲೇ ದೇಶದ ವಿವಿಧ ಪ್ರಮುಖ ನಗರಗಳಿಗೆ ಹೊಸ ಎಕ್ಸ್‌ಪ್ರೆಸ್ ಹಾಗೂ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಹಾದಿ ಸುಗಮವಾಗಲಿದೆ.

ಶಿವಮೊಗ್ಗದ ಮೂಲಸೌಕರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದಿದ್ದಾರೆ. ಶಿವಮೊಗ್ಗ ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ, ಕೋಟೆಗಂಗೂರು ರೈಲ್ವೆ ಡಿಪೋವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಿ ಮಲೆನಾಡಿನ ಸಾರಿಗೆ ಕ್ಷೇತ್ರದ ಅಭಿವೃದ್ಧಿಯ ಮತ್ತೊಂದು ಪರ್ವವನ್ನು ಆರಂಭಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.

Shimoga Railway Coaching Depot Work in Final Stage: Express Train Maintenance Soon!

New Delhi, August 05: In line with the comprehensive development of the Shimoga Lok Sabha constituency and to strengthen rail connectivity in the Malnad region, the highly ambitious project of the Shimoga Koteganguru Coaching Depot is progressing rapidly, according to information shared by Union Railway Minister Ashwini Vaishnaw in the Lok Sabha session to Shimoga MP B.Y. Raghavendra.

The Central Government has sanctioned this project at an estimated cost of ₹76.01 crore. Thanks to the persistent efforts of MP Raghavendra, works worth ₹58.82 crore have been completed by March 31, 2026, achieving more than 77% financial progress. Furthermore, to ensure speedy completion of the remaining works in the current financial year, the Railway Ministry has released an additional grant of ₹9.5 crore.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *