shimoga news | ಮಾಜಿ ಸೈನಿಕರೇ ಎಚ್ಚರ… ನಕಲಿ ಕರೆ – ಸಂದೇಶ ನಂಬಿ ಮೋಸ ಹೋಗಬೇಡಿ..!

cyber cheat

ಶಿವಮೊಗ್ಗ (shivamogga), ಆಗಸ್ಟ್ 21: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸೈನಿಕರಿಗೆ ಸಂಬಂಧಿಸಿದಂತೆ ಹಲವು ಸುಳ್ಳು ಸಂದೇಶಗಳು ಹರಿದಾಡುತ್ತಿವೆ. ಈ ಕುರಿತಂತೆ ಎಚ್ಚರವಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಹಿರೇಮಠರವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಅವರು ಆಗಸ್ಟ್ 21 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಾಜಿ ಸೈನಿಕರಿಗೆ ಉದ್ಯೋಗವಕಾಶಗಳು, ಶೀಘ್ರ ಹಣಗಳಿಕೆ, ಹೆಚ್ಚು ಲಾಭಗಳ ಹೂಡಿಕೆ, ಇ-ಕೆವೈಸಿ, ಬ್ಯಾಂಕ್ ಖಾತೆಗಳ ನವೀಕರಣ, ಮೊಬೈಲ್ ಮತ್ತು ವಾಟ್ಸಪ್ ಗಳಲ್ಲಿ ಎ.ಪಿ.ಕೆ ಫೈಲ್‌ಗಳ ಸಂದೇಶ ರವಾನೆ ಹೀಗೆ ಅನೇಕ ನಕಲಿ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಹಾಗೆಯೇ ಮೊಬೈಲ್ ಓ.ಟಿ.ಪಿ ಅಥವಾ ಇನ್ನಿತರೆ ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ಸಾರ್ವಜನಿಕರಿಗೆ ವಂಚಿಸುವ ಘಟನೆಗಳು, ಡಿಜಿಟಲ್ ಅರೆಸ್ಟ್, ವಾಟ್ಸಪ್ ಕರೆಗಳ ಮೂಲಕ ಬೆದರಿಕೆ ಒಡ್ಡುವುದು ಇತ್ಯಾದಿ ಪ್ರಕರಣಗಳು ಅತೀಯಾಗಿ ಜರುಗುತ್ತಿವೆ.

ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಈ ಕುರಿತ ಯಾವುದೇ ಆಮಿಷಗಳಿಗೆ ಒಳಗಾಗಬಾರದೆಂದು ಹಾಗೂ ನಕಲಿ ಸಂದೇಶ ಮತ್ತು ಕರೆಗಳ ಕುರಿತಂತೆ ಎಚ್ಚರಿಕೆ ವಹಿಸಬೇಕು.

ಯಾವುದೇ ರೀತಿಯ ಸೈಬರ್ ವಂಚನೆಗಳಿಗೊಳಗಾದಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ದೂರನ್ನು ನೋಂದಾಯಿಲು ಕೋರಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shimoga: Ex-servicemen Alert – Don’t Fall for Fake Calls or Messages!

Shimoga, August 21: In recent days, several false messages related to ex-servicemen have been circulating on social media. Dr. C. Hiremath, Deputy Director (PR) of the Shimoga Department of Ex-servicemen Welfare and Rehabilitation, has issued a warning in this regard.

In a press release on August 21, he stated that fake news is being spread about job opportunities for ex-servicemen, quick money schemes, high-return investments, e-KYC, bank account updates, and APK file links sent via mobile and WhatsApp.

He further noted that fraudsters are deceiving the public by obtaining mobile OTPs and other sensitive information, and cases of “digital arrest,” threats through WhatsApp calls, and similar scams are increasingly being reported.

Therefore, ex-servicemen and their dependents are urged not to fall prey to such temptations and to remain cautious about fake calls and messages.

In case of any cyber fraud, victims should immediately call 1930 to register a complaint, Dr. Hiremath emphasized in the press release.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *