ಹೊಸನಗರ (hosanagara), ಸೆಪ್ಟೆಂಬರ್ 08: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆಲಗಳಲೆ ಗ್ರಾಮದ ಶರಾವತಿ ಹಿನ್ನೀರಿನ ದಡದಲ್ಲಿ, ಸುಮಾರು 30 ರಿಂದ 40 ವರ್ಷದ ಅನಾಮಧೇಯ ಗಂಡಸಿನ ಮೃತ ದೇಹ ಪತ್ತೆಯಾದ ಘಟನೆ ನಡೆದಿದೆ.
ಮೃತ ದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿದೆ. ಹೆಸರು, ವಿಳಾಸ ಸೇರಿದಂತೆ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಪೊಲೀಸ್ ಇಲಾಖೆಯು ಸೆಪ್ಟೆಂಬರ್ 08 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತನ ಮೈ ಮೇಲೆ ಕಡು ನೀಲಿ, ಕೆಂಪು ಪಟ್ಟಿ ಇರುವ ತಿಳಿ ನೀಲಿ ಬಣ್ಣದ ತುಂಬು ತೋಳಿನ ರೆಡಿಮೇಡ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಇರುತ್ತದೆ. ಮುಖ ಸಂಪೂರ್ಣ ಕೊಳೆತು ಹೋಗಿದ್ದು ಹಲ್ಲುಗಳು ಮಾತ್ರ ಕಂಡು ಬಂದಿರುತ್ತದೆ.
ಮೃತ ದೇಹವನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ಸಂ.: 08182-261400, 08181-220388, 9480803337/9480803364 ಗಳನ್ನು ಅಥವಾ ಹೊಸನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Hosanagar, September 08: On the banks of the backwaters of the Sharavathi river in Nelagale village of Hosanagar taluk Shivamogga district the dead body of an unidentified man aged around 30 to 40 years has been found.

