ಶಿಕಾರಿಪುರ (shikaripura), ಸೆಪ್ಟೆಂಬರ್ 08 : ಮನೆಯಿಂದ ಹೊರ ಹೋದ ಮಹಿಳೆಯೋರ್ವರು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಜಾವಗಟ್ಟಿ ಗ್ರಾಮದಲ್ಲಿ ನಡೆದಿದೆ.
ಪಾರ್ವತಮ್ಮ ಎಂಬುವರೇ ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 08 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
13/08/2026 ರಂದು ಮಹಿಳೆಯು ಮನೆಯಿಂದ ಹೊರ ತೆರಳಿದ್ದರು. ನಂತರ ಮನೆಗೆ ಹಿಂತಿರುಗಿ ಬಂದಿಲ್ಲ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ. ಈ ಕುರಿತಂತೆ ಅವರ ಪತಿ ಚಂದ್ರಪ್ಪ ಅವರು ನೀಡಿದ ದೂರಿನನ್ವಯ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಹರೆ : ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು ಕನ್ನಡ ಮಾತನಾಡುತ್ತಾರೆ. ಇವರು ಕಾಣೆಯಾದ ವೇಳೆ ಹಸಿರು ಸೀರೆ ಧರಿಸಿದ್ದರು.
ಸದರಿ ಮಹಿಳೆಯ ಬಗ್ಗೆ ಮಾಹಿತಿ ಲಭ್ಯವಾದರೆ, ಶಿರಾಳಕೊಪ್ಪ ಪೊಲೀಸ್ ಠಾಣೆ ಸಂಪರ್ಕ ಸಂಖ್ಯೆ ಸಂಖ್ಯೆ: 8722983310, 9480803367 ಗೆ ಅಥವಾ ಇಮೇಲ್: shiralkoppashi@ksp.gov.in ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.
Shikaripura: Woman Missing After Leaving Home! Shikaripura September 08: A woman who left her home has mysteriously gone missing in Javagatti village of Shikaripura taluk Shivamogga district.

