shimoga news update | ಶಿವಮೊಗ್ಗ, ಭದ್ರಾವತಿಯಲ್ಲಿ ಕೆಎಸ್ಆರ್’ಪಿ ಪೊಲೀಸ್ ಲಿಖಿತ ಪರೀಕ್ಷೆ : ಸಾವಿರಾರು ಅಭ್ಯರ್ಥಿಗಳು ಭಾಗಿ

KSRP Police Written Exam Held in Shivamogga and Bhadravathi; Thousands of Candidates Participate | Shivamogga September 20: The written examination for KSRP Police Constable (RPC NKK cadre and RPC KK cadre) was conducted on September 20 at various examination centers in the cities of Shivamogga and Bhadravathi.

ಶಿವಮೊಗ್ಗ (shivamogga), ಸೆಪ್ಟೆಂಬರ್ 20: ಕೆಎಸ್ಆರ್’ಪಿ ಪೊಲೀಸ್ ಕಾನ್ಸ್’ಟೆಬಲ್ (ಆರ್’ಪಿಸಿ ಎನ್’ಕೆಕೆ ವೃಂದ) ಹಾಗೂ ಆರ್’ಪಿಸಿ ಕೆಕೆ ವೃಂದದ ಲಿಖಿತ ಪರೀಕ್ಷೆಯು, ಸೆಪ್ಟೆಂಬರ್ 20 ರಂದು ಶಿವಮೊಗ್ಗ ಹಾಗೂ ಭದ್ರಾವತಿ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.

ಆರ್’ಪಿಸಿ ಎನ್’ಕೆಕೆ ವೃಂದಕ್ಕೆ ಸಂಬಂಧಿಸಿದಂತೆ ಒಟ್ಟಾರೆ 34 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಶಿವಮೊಗ್ಗದ 29 ಹಾಗೂ ಭದ್ರಾವತಿಯ 5 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. 9380 ಪ್ರಶಿಕ್ಷಣಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಹಾಗೆಯೇ ಆರ್’ಪಿಸಿ ಕೆಕೆ ವೃಂದಕ್ಕೆ ಸಂಬಂಧಿಸಿದಂತೆ 13 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 3478 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ಜೊತೆಗೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿತ್ತು. ಪರೀಕ್ಷಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಪ್ರತಿಯೊಂದು ಕೊಠಡಿಗಳಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

KSRP Police Written Exam Held in Shivamogga and Bhadravathi; Thousands of Candidates Participate | Shivamogga September 20: The written examination for KSRP Police Constable (RPC NKK cadre and RPC KK cadre) was conducted on September 20 at various examination centers in the cities of Shivamogga and Bhadravathi.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *