ಶಿವಮೊಗ್ಗ (shivamogga), ಸೆಪ್ಟೆಂಬರ್ 25: ಅಸ್ವಸ್ಥಗೊಂಡು ಕುಸಿದು ಬಿದ್ದು ರಕ್ತಗಾಯಗೊಂಡಿದ್ದ ಮಹಿಳೆಯೋರ್ವರಿಗೆ, ‘ಅಕ್ಕ ಪಡೆ’ ನೆರವಾದ ಘಟನೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿದೆ.
ಅಕ್ಕ ಪಡೆ ಸಿಬ್ಬಂದಿ ಗಾಂಧಿ ಬಜಾರ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆ, ಮಹಿಳೆಯೋರ್ವರು ತಲೆ ಸುತ್ತಿನಿಂದ ರಸ್ತೆಯಲ್ಲಿ ಬಿದ್ದಿದ್ದರು. ಇದರಿಂದ ಅವರಿಗೆ ರಕ್ತಗಾಯವಾಗಿತ್ತು.
ತಕ್ಷಣವೇ ಸ್ಥಳದಲ್ಲಿದ್ದ ಅಕ್ಕ ಪಡೆ ಸಿಬ್ಬಂದಿಗಳಾದ ಎಎಸ್ಐ ಜಯಂತಿ, ಸಿಬ್ಬಂದಿಗಳಾದ ಮಧುರಾ, ಸುಪ್ರಿಯಾರವರು ಮಹಿಳೆಯ ನೆರವಿಗೆ ದೌಡಾಯಿಸಿದ್ದಾರೆ.
ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಹಿಳೆಯ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.
Shivamogga: Helping hand for a woman who collapsed after falling ill! | Shivamogga, September 25: An incident occurred on Gandhi Bazaar Road in Shivamogga city where the ‘Akka Pade’ (women’s police squad) came to the aid of a woman who had collapsed due to illness.
While the Akka Pade personnel were on duty on Gandhi Bazaar Road, a woman fell on the street after feeling dizzy, resulting in a bleeding injury.
Akka Pade personnel present at the scene—ASI Jayanthi and staff members Madhura and Supriya—immediately rushed to the woman’s aid.
They transported her to a nearby hospital in a vehicle and ensured she received medical treatment. Subsequently, they informed the woman’s family and sent her home with them.

