ಶಿವಮೊಗ್ಗ (shivamogga), ಸೆಪ್ಟೆಂಬರ್ 26: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 28 ರಂದು ಬೆಳಿಗ್ಗೆ 10 ಗಂಟೆಗೆ ನೇರ ‘ಉದ್ಯೋಗ ಮೇಳ’ವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. 28-09-2026 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಸಂದರ್ಶನ ನಡೆಯಲಿದೆ.
ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮಾ 18 ರಿಂದ 35 ವರ್ಷ ಒಳಗಿನ ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ: 9380663606 ಗೆ ಕರೆ ಮಾಡಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
‘Job Fair’ in Shivamogga on September 28: Prestigious Private Firms to Participatem | Shivamogga, September 26: A direct ‘Job Fair’ has been organized by the District Employment Exchange on September 28 at 10:00 AM.
Prestigious private companies will participate in this job fair and select candidates through direct interviews. The interviews will be held on September 28 at 10:00 AM at the District Employment Exchange, Gutyappa Colony, Pampa Nagar 2nd Cross, Sagar Road, Shivamogga.
Candidates holding SSLC, PUC, ITI, or Diploma qualifications, as well as graduates—aged between 18 and 35 years—are eligible to participate. Candidates attending the interview must bring their bio-data and a copy of their Aadhaar card. Admission to the job fair is free.
For further information, one may contact the District Employment Exchange, Shivamogga directly or call 9380663606, the Employment Officer stated.

