shimoga news | ಶಿವಮೊಗ್ಗ ನಗರದ ವಿವಿಧೆಡೆ ಪಾಲಿಕೆ ಆಡಳಿತದಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ : 4 ಸಾವಿರ ರೂ. ದಂಡ!

City Corporation Removes Flex Banners Across Shivamogga; ₹4,000 Fine Imposed! Shivamogga, September 29: An operation has been launched to remove flex banners installed at major roads and circles in Shivamogga city that were obstructing the movement of pedestrians and vehicles.

ಶಿವಮೊಗ್ಗ (shivamogga), ಸೆಪ್ಟೆಂಬರ್ 29: ಶಿವಮೊಗ್ಗ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜನ – ವಾಹನ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು, ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಆಡಳಿತ ಆರಂಭಿಸಿದೆ.

ಪಾಲಿಕೆ ಆಯುಕ್ತ ಮಾಯಣ್ಣಗೌಡರ ಸೂಚನೆಯಂತೆ, ಆರೋಗ್ಯ ವಿಭಾಗದ ಇನ್ಸ್’ಪೆಕ್ಟರ್ ವಸಂತ್ ಕುಮಾರ್ ನೇತೃತ್ವದ ತಂಡವು ನಿನ್ನೆ ರಾತ್ರಿಯಿಂದಲೇ ನಗರದ ಹಲವೆಡೆ ಜನ – ವಾಹನ ಸಂಚಾರಕ್ಕೆ ಅಡೆತಡೆಯಾಗಿದ್ದ ಫ್ಲೆಕ್ಸ್ – ಬಂಟಿಂಗ್ಸ್ ಗಳ ತೆರವು ಕಾರ್ಯ ಆರಂಭಿಸಿದೆ.

ಅಪಾಯಕಾರಿ ರೀತಿಯಲ್ಲಿ ಫ್ಲೆಕ್ಸ್ ಅಳವಡಿಸಿದ್ದ ಇಬ್ಬರಿಗೆ, ತಲಾ 2 ಸಾವಿರದಂತೆ ಒಟ್ಟಾರೆ 4 ಸಾವಿರ ರೂ. ದಂಡ ಕೂಡ ಹಾಕಲಾಗಿದೆ. ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ನಿಯಮ ಉಲ್ಲಂಘಿಸಿ ಫ್ಲೆಕ್ಸ್ ಅಳವಡಿಕೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆಡಳಿತ ಮೂಲಗಳು ಮಾಹಿತಿ ನೀಡಿವೆ.

ದೂರು : ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸುಗಮ ಜನ – ವಾಹನ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸಿದ್ದ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಅನದಿಕೃತ ಫ್ಲೆಕ್ಸ್ ತೆರವುಗೊಳಿಸುವುದರ ಜೊತೆಗೆ, ದಂಡ ವಿಧಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

City Corporation Removes Flex Banners Across Shivamogga; ₹4,000 Fine Imposed! | Shivamogga, September 29: An operation has been launched to remove flex banners installed at major roads and circles in Shivamogga city that were obstructing the movement of pedestrians and vehicles. Acting on the instructions of City Corporation Commissioner Mayannagowda, a team led by Health Department Inspector Vasanth Kumar began the removal of flex banners and buntings—which were causing obstructions to traffic and pedestrian movement—across various parts of the city starting last night.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *