ಶಿಕಾರಿಪುರ (shikaripura), ಅಕ್ಟೋಬರ್ 23: ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಬಳಿ ಅಕ್ಟೋಬರ್ 23 ರ ಸಂಜೆ ಸಂಭವಿಸಿದೆ.
ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ, ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದ ಬಂದಿದೆ.
ಕಾರು ಶಿವಮೊಗ್ಗದಿಂದ ಶಿಕಾರಿಪುರ ಕಡೆಗೆ ಹಾಗೂ ಅಡಿಕೆ ತುಂಬಿದ್ದ ಕ್ಯಾಂಟರ್ ಲಾರಿಯು ಶಿಕಾರಿಪುರದಿಂದ ಶಿವಮೊಗ್ಗದೆಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟು ಲಭ್ಯವಾಗಬೇಕಾಗಿದೆ.
Shikaripura, October 23: A head-on collision between a lorry and a car occurred near Taralaghatta Camp in the Shikaripura taluk of Shivamogga district on the evening of October 23.


