shimoga news | ಶಿವಮೊಗ್ಗದ ಆಸ್ಪತ್ರೆಗೆ ಬಂದಿದ್ದ ಕಾರವಾರದ ಮಹಿಳೆ ನಾಪತ್ತೆ!

Woman from Karwar goes missing after arriving at a hospital in Shivamogga! Shivamogga, November 07: An incident occurred on November 05 wherein a woman, who had been brought to Manasa Hospital in Shivamogga city for medical treatment, went missing.

ಶಿವಮೊಗ್ಗ (shivamogga), ನವೆಂಬರ್ 07: ಶಿವಮೊಗ್ಗ ನಗರದ ಮಾನಸ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದ್ದ ಮಹಿಳೆಯೋರ್ವರು, ಕಣ್ಮರೆಯಾಗಿರುವ ಘಟನೆ ನವೆಂಬರ್ 05 ರಂದು ನಡೆದಿದೆ.

ಕಾರವಾರ ನಗರದ ನಿವಾಸಿ ಭೂದೇವಿ (69) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದ ವೇಳೆ ಕಣ್ಮರೆಯಾಗಿದ್ದಾರೆ.

ಚಹರೆ : 5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಎಡಗೈ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕೆಂಪು ಬಣ್ಣದ ಸೀರೆ ಧರಿಸಿದ್ದು, ನೀಲಿ ಬಣ್ಣದ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ.

ಇವರ ಬಗ್ಗೆ ಸುಳಿವು ದೊರತಲ್ಲಿ ದೊಡ್ಡಪೇಟಿ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 948366947 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Woman from Karwar goes missing after arriving at a hospital in Shivamogga! | Shivamogga, November 07: An incident occurred on November 05 wherein a woman, who had been brought to Manasa Hospital in Shivamogga city for medical treatment, went missing.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *