shimoga crime news | ಶಿವಮೊಗ್ಗ : ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಕುಡುಕರು – ಕೇಸ್ ದಾಖಲು!

Shivamogga: Drinkers Caught on Drone Camera – Case Registered! | Shivamogga, November 23: In Shivamogga city, police have registered cases against individuals who were found consuming alcohol illegally in public spaces and residential layouts during the night, based on footage captured by a drone camera. On the night of November 22, a drone camera operation was conducted in areas including Bommanakatte, Ratnagiri Layout, Basavanaganguru, and HUDCO—all falling under the jurisdiction of the Vinobanagara Police Station.

ಶಿವಮೊಗ್ಗ (shivamogga), ನವೆಂಬರ್ 23: ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ, ರಾತ್ರಿ ವೇಳೆ ಸಾರ್ವಜನಿಕ ಸ್ಥಳ ಹಾಗೂ ಲೇಔಟ್ ಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಪೊಲೀಸರು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿಕೊಂಡ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮನಕಟ್ಟೆ, ರತ್ನಗಿರಿ ಲೇಔಟ್, ಬಸವನಗಂಗೂರು, ಹುಡ್ಕೋ ಮೊದಲಾದೆಡೆ ನವೆಂಬರ್ 22 ರ ರಾತ್ರಿ ಡ್ರೋಣ್ ಕ್ಯಾಮರಾ ಕಾರ್ಯಾಚರಣೆ ನಡೆಸಲಾಗಿತ್ತು.

ಈ ವೇಳೆ ಹಲವೆಡೆ ಸಾರ್ವಜನಿಕ ಸ್ಥಳ, ಲೇಔಟ್ ಗಳಲ್ಲಿ ಕೆಲವರು ಮದ್ಯ ಸೇವನೆ ಮಾಡುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಕಂಡುಬಂದಿತ್ತು. ಇದರ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ತೆರಳಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ಧಾರೆ.

ಇವರ ವಿರುದ್ದ ಲಘು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸ್ ಇಲಾಖೆಯು ನವೆಂಬರ್ 23 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ನಾಗರಿಕರ ಮೆಚ್ಚುಗೆ 

*** ಶಿವಮೊಗ್ಗ ನಗರದ ಹೊರವಲಯದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಸೇವನೆ ಮಾಡಲಾಗುತ್ತಿದೆ. ಮದ್ಯದ ಪೌಚ್, ಬಾಟಲಿ, ತಿಂಡಿ-ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆದು ಗಲೀಜು ಮಾಡಲಾಗುತ್ತಿದೆ. ಆಹಾರ ಪದಾರ್ಥಗಳ ಪ್ಲಾಸ್ಟಿಕ್ ಗಳನ್ನು ಜಾನುವಾರುಗಳು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಿವೆ. ಹಾಗೆಯೇ ಕೆಲ ಕಿಡಿಗೇಡಿಗಳು ಮದ್ಯ ಸೇವನೆಯ ನಂತರ ಬಾಟಲಿಗಳನ್ನು ರಸ್ತೆಯ ಮೇಲೆಯೇ ಒಡೆದು ಹಾಕುತ್ತಿದ್ದಾರೆ. ಇವುಗಳಿಂದ ಜನ – ಜಾನುವಾರುಗಳು ಗಾಯಗೊಳ್ಳುತ್ತಿವೆ. ಪರಿಸರ ಮಲೀನವಾಗುತ್ತಿದೆ. ಇದೀಗ ರಾತ್ರಿ ವೇಳೆ ಡ್ರೋಣ್ ಕಾರ್ಯಾಚರಣೆ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವವರನ್ನು ಪೊಲೀಸರು ಪತ್ತೆ ಹಚ್ಚಿ ಕೇಸ್ ದಾಖಲಿಸುತ್ತಿರುವುದಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shivamogga: Drinkers Caught on Drone Camera – Case Registered!

Shivamogga, November 23: In Shivamogga city, police have registered cases against individuals who were found consuming alcohol illegally in public spaces and residential layouts during the night, based on footage captured by a drone camera.

On the night of November 22, a drone camera operation was conducted in areas including Bommanakatte, Ratnagiri Layout, Basavanaganguru, and HUDCO—all falling under the jurisdiction of the Vinobanagara Police Station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *