ಶಿವಮೊಗ್ಗ – ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ..?

ಶಿವಮೊಗ್ಗ : ಅಂತಿಮ ಹಂತಕ್ಕೆರೈಲ್ವೆ ಫ್ಲೈ ಓವರ್ ಕಾಮಗಾರಿ

-ಬಿ. ರೇಣುಕೇಶ್-

ಶಿವಮೊಗ್ಗ, ಆ. 16: ಶಿವಮೊಗ್ಗ ನಗರದ ಹೊರವಲಯ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿರುವ, ರೈಲ್ವೆ ಫ್ಲೈ ಓವರ್ (ಮೇಲ್ಸೇತುವೆ) ಕಾಮಗಾರಿ ಅಂತೂ ಇಂತೂ ಕೊನೆಗೂ ಅಂತಿಮ ಹಂತಕ್ಕೆ ಬರಲಾರಂಭಿಸಿದೆ. ಸದ್ಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ದೊರಕಿದೆ.

ಶಿವಮೊಗ್ಗ - ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ?

ಈಗಾಗಲೇ ಫ್ಲೈ ಓವರ್ ನ ಆರ್ಚ್, ತಡೆಗೋಡೆ, ಪಾದಚಾರಿ ಮಾರ್ಗ ಸೇರಿದಂತೆ ಮುಖ್ಯ ಕಾಮಗಾರಿಗಳು ಪೂರ್ಣಗೊಂಡಿವೆ. ಆರ್ಚ್ ಬಳಿ ಡಾಂಬರೀಕರಣ, ಪೈಂಟಿಂಗ್, ಪ್ಲಂಬಿಂಗ್ ಮತ್ತೀತರ ಕೆಲಸಗಳು ನಡೆಯುತ್ತಿವೆ. ಉಳಿದಂತೆ ಎರಡು ಬದಿ ಡಾಂಬರೀಕರಣ, ವಿದ್ಯುತ್ ದೀಪ, ಸಂಚಾರಿ ನಿಯಮಗಳ ಫಲಕ ಅಳವಡಿಕೆ  ಸೇರಿದಂತೆ ಇನ್ನಿತರೆ ತಾಂತ್ರಿಕ ಕೆಲಸ ಕಾರ್ಯಗಳು ನಡೆಯಬೇಕಾಗಿದೆ.

ಶಿವಮೊಗ್ಗ - ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ?

ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸರಿಸುಮಾರು ಕಳೆದ ಎರಡೂವರೆ ವರ್ಷಗಳ ಹಿಂದೆ ಫ್ಲೈ ಓವರ್ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ವಿಳಂಬಗತಿಯ ಕೆಲಸಕಾರ್ಯದಿಂದ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ನಾಗರೀಕರು ದೂರುತ್ತಾರೆ.

ಶಿವಮೊಗ್ಗ - ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ?

ಫ್ಲೈ ಓವರ್ ಸಮೀಪದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಸಮೀಪದ ಕಾಶೀಪುರ ಬಡಾವಣೆಯ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿಸಿದೆ. ರಸ್ತೆ ಇಕ್ಕೆಲಗಳ ನಿವಾಸಿಗಳ ಗೋಳು ಹೇಳತೀರದಂತಾಗಿದೆ.

ಶಿವಮೊಗ್ಗ - ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ?

ಯಾವಾಗ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡು, ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆಯೋ? ಸಂಚಾರ ದಟ್ಟಣೆಯ ಕಿರಿಕಿರಿಗೆ ಮುಕ್ತಿ ದೊರಕಲಿದೆಯೋ? ಎಂದು ಸ್ಥಳೀಯ ನಾಗರೀಕರು ಪ್ರಶ್ನಿಸುತ್ತಾರೆ.

ರಸ್ತೆ ದುರಸ್ತಿಗೆ ಆಗ್ರಹ: ಫ್ಲೈ ಓವರ್ ಕಾಮಗಾರಿ ಕಾರಣದಿಂದ ದೇವರಾಜ ಅರಸು ನಗರ ಸಮೀಪದಿಂದ ಪೆಟ್ರೋಲ್ ಬಂಕ್ ವರೆಗಿನ ರಸ್ತೆಯು ಗುಂಡಿ – ಗೊಟರು ಬಿದ್ದಿದೆ. ಜನ – ವಾಹನ ಸಂಚಾರ ದುಸ್ತರವಾರಿ ಪರಿಣಮಿಸಿದೆ.

ಶಿವಮೊಗ್ಗ - ಅಂತಿಮ ಹಂತಕ್ಕೆ ಫ್ಲೈ ಓವರ್ ಕಾಮಗಾರಿ : ಉದ್ಘಾಟನೆ ಯಾವಾಗ?

ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ಸದರಿ ರಸ್ತೆ ದುರಸ್ತಿಗೆ ಪಿಡಬ್ಲ್ಯೂಡಿ ಹಾಗೂ ರೈಲ್ವೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →