ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

-ಬಿ. ರೇಣುಕೇಶ್-

ಶಿವಮೊಗ್ಗ, ಆ. 15: ಶಿವಮೊಗ್ಗ ನಗರದ ವೀರಣ್ಣನ ಲೇಔಟ್ ಬಳಿ, ರೈಲ್ವೆ ಇಲಾಖೆ ನಿರ್ಮಿಸುತ್ತಿದ್ದ ಅಂಡರ್ ಪಾಸ್ (ಕೆಳ ಸೇತುವೆ) ಕಾಮಗಾರಿ ಪೂರ್ಣಗೊಂಡಿದೆ. ವಾಹನಗಳ ಸಂಚಾರ ಕೂಡ ಆರಂಭವಾಗಿದೆ.

ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

ಸದ್ಯ ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನಕ ನಗರ, ಸೂರ್ಯ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಿದೆ.

ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

ಈ ಮೊದಲು  ಸದರಿ ಸ್ಥಳದಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಇತ್ತು. ಅಪಘಾತಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಇದನ್ನು ಮುಚ್ಚಿತ್ತು. ಇದರಿಂದ ಸುತ್ತಿ ಬಳಸಿ ನಾಗರೀಕರು ಸಂಚರಿಸುವಂತಾಗಿತ್ತು.

ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

ಈ ಹಿನ್ನೆಲೆಯಲ್ಲಿ ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂದು ಸ್ಥಳಿಯ ನಿವಾಸಿಗಳು ರೈಲ್ವೆ ಇಲಾಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಪತ್ರ ಅರ್ಪಿಸಿದ್ದರು. ಇದೆಲ್ಲದರ ಫಲವಾಗಿ ರೈಲ್ವೆ ಇಲಾಖೆಯು ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಂಡಿತ್ತು.  

ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

ಪ್ರಾರಂಭದಲ್ಲಿ ಶರವೇಗದಲ್ಲಿ ನಡೆದ ಕಾಮಗಾರಿಯೂ ನಂತರ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಆಮೆ ವೇಗದಲ್ಲಿ ನಡೆಯಲಾರಂಭಿಸಿತ್ತು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಶಿವಮೊಗ್ಗದ ಮೊದಲ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣ – ವಾಹನಗಳ ಸಂಚಾರಕ್ಕೆ ಮುಕ್ತ!

ಕಳೆದ ಕೆಲ ತಿಂಗಳುಗಳಿಂದ  ವೇಗ ಪಡೆದುಕೊಂಡಿದ್ದ ಕಾಮಗಾರಿಯೂ ಇದೀಗ ಪೂರ್ಣಗೊಂಡಿದೆ. ವಾಹನಗಳ ಸಂಚಾರ ಆರಂಭಗೊಂಡಿದ್ದು, ಇದು ಸ್ಥಳೀಯ ನಾಗರೀಕರ ಸಂತಸಕ್ಕೆ ಕಾರಣವಾಗಿದೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →