ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ – ಕೊನೆ ಹಂತದ ಕಾಮಗಾರಿಗಳು ವಿಳಂಬ!

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಶಿವಮೊಗ್ಗ, ಸೆ. 5: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗುತ್ತಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕಳೆದ ಕೆಲ ದಿನಗಳಿಂದ ಫ್ಲೈ ಓವರ್ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಇದರಿಂದ ರೈಲ್ವೇ ಗೇಟ್  ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಳಿ ತಲೆದೋರುತ್ತಿದ್ದ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಬಿದ್ದಿದೆ. ಪ್ರಸ್ತುತ ಸೇತುವೆಗೆ ಬಣ್ಣ ಹಚ್ಚುವ, ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಇತರೆ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿವೆ.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಆದರೆ ಕೊನೆ ಹಂತದ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ಸಾಗುತ್ತಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಈಗಾಗಲೇ ಸಮೀಪದ ವೀರಣ್ಣನ ಲೇಔಟ್ ಬಳಿಯ ರೈಲ್ವೆ ಹಳಿಗೆ ನಿರ್ಮಿಸಲಾಗಿದ್ದ ಕೆಳ ಸೇತುವೆಯನ್ನು ಇತ್ತೀಚೆಗಷ್ಟೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಅದರಂತೆ ಕಾಶೀಪುರ ರೈಲ್ವೆ ಗೇಟ್ ಬಳಿಯ ಮೇಲ್ಸೇತುವೆಯ ಎರಡು ಬದಿ ಬಾಕಿಯಿರುವ ಡಾಂಬರೀಕರಣ ಕಾರ್ಯ ನಡೆಸಬೇಕು.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ!

ಕಾಲಮಿತಿಯೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *