
ಶಿವಮೊಗ್ಗದಲ್ಲಿ ಶಾಲಾ ವಾಹನಗಳ ತಪಾಸಣೆ : ಚಾಲಕರಿಗೆ ಟ್ರಾಫಿಕ್ ಪೊಲೀಸರ ಖಡಕ್ ವಾರ್ನಿಂಗ್!
ಶಿವಮೊಗ್ಗ (shivamogga), ಜೂ. 18: ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ದಿಢೀರ್ ತಪಾಸಣೆ ನಡೆಸಿದ ಟ್ರಾಫಿಕ್ ಠಾಣೆ ಪೊಲೀಸರು (traffic police), ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಪಾಲನೆ ಕುರಿತಂತೆ ಸಲಹೆ – ಸೂಚನೆಗಳನ್ನು ನೀಡಿದ್ದಾರೆ.
ಟ್ರಾಫಿಕ್ ಇನ್ಸ್’ಪೆಕ್ಟರ್ ಲತಾ ಬಿ ಕೆ ಅವರ ನೇತೃತ್ವದಲ್ಲಿ ಶಾಲಾ ವಾಹನಗಳ (school vechiles) ತಪಾಸಣೆ ಕಾರ್ಯ ನಡೆಯಿತು. ಶಾಲಾ ಮಕ್ಕಳ ವಾಹನಗಳಲ್ಲಿ ಸುರಕ್ಷತಾ ನಿಯಮಗಳ (safety regulations) ಪಾಲನೆ ಮಾಡಲಾಗುತ್ತಿದೆಯೇ ಎಂಬುವುದರ ಪರಿಶೀಲನೆ ನಡೆಸಲಾಗಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ (police dept) ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ‘ವಾಹನ ನೊಂದಣಿ ಪ್ರಮಾಣ ಪತ್ರ, ಎಮಿಷನ್ ಟೆಸ್ಟ್, ಇನ್ಸೂರೆನ್ಸ್ ಪತ್ರ, ಚಾಲನಾ ಪರವಾನಿಗೆ (driving license), ಬ್ಯಾಡ್ಜ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಇತರೆ ವಿವರಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇದೇ ವೇಳೆ ವಾಹನಗಳ ಚಾಲಕರುಗಳಿಗೆ ಸಂಚಾರಿ ನಿಯಮಗಳ (traffic rules) ಪಾಲನೆ ಕುರಿತಂತೆ ತಿಳಿವಳಿಕೆ ನೀಡಲಾಗಿದೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಬಾರದು. ಚಾಲನೆ ವೇಳೆ ಮೊಬೈಲ್ ಪೋನ್ (mobile phone) ಬಳಸದಂತೆ, ಮದ್ಯ ಸೇವಿಸಿ ವಾಹನ ಚಲಾಯಿಸದಂತೆ
ಹಾಗೂ ವಾಹನಗಳಲ್ಲಿ ಲಭ್ಯವಿರುವ ಆಸನಗಳಿಗಿಂತ ಹೆಚ್ಚಿನ ಮಕ್ಕಳನ್ನು ಕೂರಿಸಿಕೊಂಡು ಹೋಗಬಾರದು. ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಕೈಗೊಳ್ಳುವಂತೆ ಪೊಲೀಸರು (police) ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.