ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು!

Linganamakki dam water has increased the weeds of Joga waterfall! ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು

ಜೋಗಫಾಲ್ಸ್ (jogfalls), ಆ. 1: ಲಿಂಗನಮಕ್ಕಿ ಜಲಾಶಯದಿಂದ (linganamakki dam) ನೀರು ಹೊರಬಿಟ್ಟ ನಂತರ ವಿಶ್ವ ವಿಖ್ಯಾತ ಜೋಗ ಜಲಪಾತದ (world famous jogfalls) ಜಲಧಾರೆಯ ವೈಭೋಗ ಮತ್ತಷ್ಟು ಜೋರಾಗಿದ್ದು, ಅಕ್ಷರಶಃ ಭೋರ್ಗರೆಯಲಾರಂಭಿಸಿದೆ!

ಆಗಸ್ಟ್ 1 ರ ಗುರುವಾರ ಲಿಂಗನಮಕ್ಕಿ ಡ್ಯಾಂನಿಂದ (linganamakki reservoir) ಸುಮಾರು 10 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ (outflow). ಇದು ಜೋಗ (jog) ಜಲಪಾತಕ್ಕೆ ಹೊಸ ಕಳೆ ತಂದಿದೆ. ಜಲಪಾತದಿಂದ ಭಾರೀ ಪ್ರಮಾಣದ ನೀರು ಬೀಳುತ್ತಿರುವುದನ್ನು ಪ್ರವಾಸಿಗರು (tourists) ಕಣ್ತುಂಬಿಕೊಳ್ಳುತ್ತಿದ್ದಾರೆ.

ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ, ಜೋಗ ಜಲಪಾತ ಗತ ವೈಭವಕ್ಕೆ ಮರಳಲಿದೆ. ಅಮೆರಿಕಾದ ನಯಾಗಾರ ಜಲಪಾತದಂತೆ (america niagara falls) ಗೋಚರಿಸಲಿದೆ ಎಂದು ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.

ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವು (inflow) ಹೆಚ್ಚಾದರೆ, ಡ್ಯಾಂನಿಂದ ಹೊರ ಹರಿವು ಕೂಡ ಹೆಚ್ಚಾಗಲಿದೆ. ಶನಿವಾರ, ಭಾನುವಾರ ಈ ಪ್ರಮಾಣದಲ್ಲಿ ಏರಿಕೆಯಾದರೆ ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಒಟ್ಟಾರೆ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನಿಂದ ಜೋಗದ ಜಲಧಾರೆಯ (jogfalls water) ಸಿರಿ ಮತ್ತಷ್ಟು ಬೆಳಗುತ್ತಿರುವುದಂತೂ ಸತ್ಯವಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →