jogfalls | ಜೀವನವನ್ನೇ ಅಂತ್ಯಗೊಳಿಸಲು ಜೋಗ್’ಫಾಲ್ಸ್ ಗೆ ಆಗಮಿಸಿದ ಬೆಂಗಳೂರಿನ ಬಟ್ಟೆ ವ್ಯಾಪಾರಿ : ಮುಂದೇನಾಯ್ತು?
ಜೋಗ್’ಫಾಲ್ಸ್ (jogfalls), ಆಗಸ್ಟ್ 28: ಸಾಲ ಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜೋಗ ಜಲಪಾತದ ಬಳಿ ಆ**ತ್ಮ*ಹ**ತ್ಯೆ ಮಾಡಿಕೊಳ್ಳಲು ಆಗಮಿಸಿದ, ಬೆಂಗಳೂರಿನ ಬಟ್ಟೆ ವ್ಯಾಪಾರಿಯೋರ್ವರನ್ನು ಪೊಲೀಸರು ರಕ್ಷಣೆ ಮಾಡಿದ ಘಟನೆ ನಡೆದಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ಬಿಡಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ವಿವರ: ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೋರ್ವರು, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿಯೂ ನಷ್ಟ ಮಾಡಿಕೊಂಡಿದ್ದರು.
ಪೋಷಕರ ಆರೋಗ್ಯದಲ್ಲಿಯೂ ಸಮಸ್ಯೆಯಿತ್ತು. ಮತ್ತೊಂದೆಡೆ, ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ತೊರೆದಿದ್ದರು. ವಿವಿಧೆಡೆ ಸುತ್ತಾಡಿದ್ದರು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು.
ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ, ಆಗಸ್ಟ್ 25 ರಂದು ಜೋಗ ಜಲಪಾತಕ್ಕೆ ಆಗಮಿಸಿದ್ದರು. ಅಲ್ಲಿನ ಅಪಾಯಕಾರಿ ಸ್ಥಳಗಳ ಬಗ್ಗೆ ಸ್ಥಳೀಯ ಆಟೋ ಚಾಲಕರಲ್ಲಿ ವಿಚಾರಿಸುತ್ತಿದ್ದರು. ಅನುಮಾನಗೊಂಡ ಆಟೋ ಚಾಲಕರು ಜೋಗ ಜಲಪಾತದ ಬಳಿ ಗಸ್ತಿನಲ್ಲಿದ್ದ ಕಾರ್ಗಲ್ ಸಬ್ ಇನ್ಸ್’ಪೆಕ್ಟರ್ ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದರು.
ಅವರು ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರು ತನ್ನ ವೃತ್ತಾಂತ ತಿಳಿಸಿದ್ದರು. ಸಬ್ ಇನ್ಸ್’ಪೆಕ್ಟರ್ ನಾಗರಾಜ್ ಅವರು ವ್ಯಾಪಾರಿಯೊಂದಿಗೆ ಮಾತುಕತೆ ನಡೆಸಿ, ಆತ್ಮಸ್ಥೈರ್ಯ ತುಂಬಿದ್ದರು. ಪೋಷಕರಿಗೆ ಫೊನ್ ಕರೆ ಮಾಡಿ ಮಾಹಿತಿ ನೀಡಿದ್ದರು. ನಂತರ ವ್ಯಾಪಾರಿಯನ್ನು ಬೆಂಗಳೂರಿನ ಅವರ ಮನೆಗೆ ಕಳಿಸಿ ಕೊಟ್ಟಿದ್ದಾರೆ.
Jog Falls, August 28: A Bengaluru-based clothing merchant, fed up with his life due to debt, was rescued by the police after he arrived near Jog Falls to commit su**ic**ide.
