
ಜೋಗ ಜಲಪಾತದ ಕಳೆ ಹೆಚ್ಚಿಸಿದ ಲಿಂಗನಮಕ್ಕಿ ಡ್ಯಾಂ ನೀರು!
ಜೋಗಫಾಲ್ಸ್ (jogfalls), ಆ. 1: ಲಿಂಗನಮಕ್ಕಿ ಜಲಾಶಯದಿಂದ (linganamakki dam) ನೀರು ಹೊರಬಿಟ್ಟ ನಂತರ ವಿಶ್ವ ವಿಖ್ಯಾತ ಜೋಗ ಜಲಪಾತದ (world famous jogfalls) ಜಲಧಾರೆಯ ವೈಭೋಗ ಮತ್ತಷ್ಟು ಜೋರಾಗಿದ್ದು, ಅಕ್ಷರಶಃ ಭೋರ್ಗರೆಯಲಾರಂಭಿಸಿದೆ!
ಆಗಸ್ಟ್ 1 ರ ಗುರುವಾರ ಲಿಂಗನಮಕ್ಕಿ ಡ್ಯಾಂನಿಂದ (linganamakki reservoir) ಸುಮಾರು 10 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ (outflow). ಇದು ಜೋಗ (jog) ಜಲಪಾತಕ್ಕೆ ಹೊಸ ಕಳೆ ತಂದಿದೆ. ಜಲಪಾತದಿಂದ ಭಾರೀ ಪ್ರಮಾಣದ ನೀರು ಬೀಳುತ್ತಿರುವುದನ್ನು ಪ್ರವಾಸಿಗರು (tourists) ಕಣ್ತುಂಬಿಕೊಳ್ಳುತ್ತಿದ್ದಾರೆ.
ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ, ಜೋಗ ಜಲಪಾತ ಗತ ವೈಭವಕ್ಕೆ ಮರಳಲಿದೆ. ಅಮೆರಿಕಾದ ನಯಾಗಾರ ಜಲಪಾತದಂತೆ (america niagara falls) ಗೋಚರಿಸಲಿದೆ ಎಂದು ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.
ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವು (inflow) ಹೆಚ್ಚಾದರೆ, ಡ್ಯಾಂನಿಂದ ಹೊರ ಹರಿವು ಕೂಡ ಹೆಚ್ಚಾಗಲಿದೆ. ಶನಿವಾರ, ಭಾನುವಾರ ಈ ಪ್ರಮಾಣದಲ್ಲಿ ಏರಿಕೆಯಾದರೆ ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಒಟ್ಟಾರೆ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನಿಂದ ಜೋಗದ ಜಲಧಾರೆಯ (jogfalls water) ಸಿರಿ ಮತ್ತಷ್ಟು ಬೆಳಗುತ್ತಿರುವುದಂತೂ ಸತ್ಯವಾಗಿದೆ.
More Stories
jogfalls | ಜೀವನವನ್ನೇ ಅಂತ್ಯಗೊಳಿಸಲು ಜೋಗ್’ಫಾಲ್ಸ್ ಗೆ ಆಗಮಿಸಿದ ಬೆಂಗಳೂರಿನ ಬಟ್ಟೆ ವ್ಯಾಪಾರಿ : ಮುಂದೇನಾಯ್ತು?
A Bengaluru cloth merchant arrived at Jog’ Falls to end his life: What happened next?
ಜೀವನವನ್ನೇ ಅಂತ್ಯಗೊಳಿಸಲು ಜೋಗ್’ಫಾಲ್ಸ್ ಗೆ ಆಗಮಿಸಿದ ಬೆಂಗಳೂರಿನ ಬಟ್ಟೆ ವ್ಯಾಪಾರಿ : ಮುಂದೇನಾಯ್ತು?
jogfalls | ಮುಂಗಾರು ಮಳೆ : ಜೋಗ ಜಲಪಾತಕ್ಕೆ ಜೀವ ಕಳೆ!
Monsoon rain : Jog Falls attracting tourists!
jogfalls | ಮುಂಗಾರು ಮಳೆ : ಜೋಗ ಜಲಪಾತಕ್ಕೆ ಜೀವ ಕಳೆ! #shimoga #shivamogga #sagara #jogfalls
jogfalls | ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ
Jog Falls viewing allowed from May 1st
ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ
jogfalls |ಜೋಗ ಜಲಪಾತಕ್ಕೆ ಪ್ರವೇಶ ನಿರ್ಬಂಧ ಎಲ್ಲಿಯವರೆಗೆ? ಕಾರಣವೇನು?
jogfalls | How long will the access to Joga Falls be restricted? What is the reason?
jogfalls |ಜೋಗ ಜಲಪಾತಕ್ಕೆ ಪ್ರವೇಶ ನಿರ್ಬಂಧ ಎಲ್ಲಿಯವರೆಗೆ? ಕಾರಣವೇನು?
jogfalls | ಲಿಂಗನಮಕ್ಕಿ ಡ್ಯಾಂ ಹೊರಹರಿವು ಹೆಚ್ಚಳ : ಜೋಗದಲ್ಲಿ ಜಲಧಾರೆಯ ಭೋರ್ಗರೆತ!
jogfalls | Linganamakki Dam discharge increase : jogfalls beauty!
ಲಿಂಗನಮಕ್ಕಿ ಡ್ಯಾಂ ಹೊರಹರಿವು ಹೆಚ್ಚಳ : ಜೋಗದಲ್ಲಿ ಜಲಧಾರೆಯ ಭೋರ್ಗರೆತ!
ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!
monsoon rain – continued crowd to Joga falls…!
ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!