shimoga | Shimoga - An unknown person died in an accident: Traffic police requested to help in tracing the heirs shimoga | ಶಿವಮೊಗ್ಗ - ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ

shimoga | ಶಿವಮೊಗ್ಗ – ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ

ಶಿವಮೊಗ್ಗ (shivamogga), ಆ. 20:  ರಸ್ತೆ ಅಪಘಾತದಲ್ಲಿ (accident) ಮೃತಪಟ್ಟ ಅಪರಿಚಿತ ವ್ಯಕ್ತಿಯ (unknown person) ವಾರಸುದಾರರ ಪತ್ತೆಗೆ ಸಹಕರಿಸುವಂತೆ, ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು (traffic police) ನಾಗರೀಕರಿಗೆ ಮನವಿ ಮಾಡಿದ್ದಾರೆ.

ಆ.17 ರಂದು ನಗರದ ಸಾಗರ ರಸ್ತೆ (sagar road) ಮಹೀಂದ್ರ ಶೋ ರೂಂ ಎದುರು ಮೋಟಾರ್ ಬೈಕ್ ಡಿಕ್ಕಿ (bike accident) ಹೊಡೆದು, ಸುಮಾರು 35 ವರ್ಷದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ (govt Meggan hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ. 18 ರಂದು ಮೃತಪಟ್ಟಿರುತ್ತಾರೆ (death). 

ಮೃತರ ಹೆಸರು, ವಿಳಾಸ, ವಾರಸುದಾರರ ವಿವರ ಸೇರಿದಂತೆ ಯಾವುದೇ ಮಾಹಿತಿ ಗೊತ್ತಾಗಿಲ್ಲ. ಮೃತ ವ್ಯಕ್ತಿಯು 5.8 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.

ಮೃತನ ಬಲಮುಂಗೈ ಒಳಭಾಗದಲ್ಲಿ ಅಮ್ಮ (Amma) ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಷರ್ಟ್, ನಶೆ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಮೃತರ ವಾರಸುದಾರರ  ಬಗ್ಗೆ ಮಾಹಿತಿ ದೊರಕಿದಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆ (shimoga west traffic police station) ಸಂಪರ್ಕ ಸಂಖ್ಯೆ.: 08182-261417/ 9480803346/9480803309 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

shimoga | Waterlogged during rains - Bangalore's plight is also in Shivamogga city: Will the administrators wake up? shimoga | ಮಳೆ ವೇಳೆ ಜಲಾವೃತ - ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು? Previous post shimoga | ಶಿವಮೊಗ್ಗ – ಉಕ್ಕಿ ಹರಿದ ಕೆರೆಗಳು : ಜಲಾವೃತವಾದ ಬಡಾವಣೆ ; ಗಮನಹರಿಸುವುದೆ ಜಿಲ್ಲಾಡಳಿತ?!
Shimoga | Shivamogga: When will the Upa Lokayukta hear the public's complaints? Where? shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ? Next post shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ