Shimoga | Shivamogga: When will the Upa Lokayukta hear the public's complaints? Where? shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ?

shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ

ಶಿವಮೊಗ್ಗ (shivamogga), ಆ. 20: ಕರ್ನಾಟಕ ಲೋಕಾಯುಕ್ತ ಪೊಲೀಸ್ (Lokayukta police) ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆಗಸ್ಟ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ (public Grievance Meeting) ಅರ್ಜಿ ಸ್ವೀಕಾರ ಸಭೆ ನಡೆಸುವರು. 

ಆ. 23 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ (sorab) ತಾಲೂಕು ಕಚೇರಿ ಸಭಾಂಗಣ, ಆ.27 ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ (thirthahalli) ತಾಲೂಕು ಕಚೇರಿ ಸಭಾಂಗಣ ಮತ್ತು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿಕಾರಿಪುರ (shikaripura) ತಾಲೂಕು ಕಚೇರಿ ಸಭಾಂಗಣ,  

ಆ.28 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸಾಗರ (Sagar) ತಾಲೂಕು ಪಂಚಾಯಿತಿ ಸಭಾಂಗಣ ಮತ್ತು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಹೊಸನಗರ (hosanagara) ತಾಲೂಕು ಕಚೇರಿ ಸಭಾಂಗಣ, ಆ.29 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಭದ್ರಾವತಿ (bhadravati) ತಾಲೂಕು ಪಂಚಾಯಿತಿ ಸಭಾಂಗಣ, 

ಆ-30 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿವಮೊಗ್ಗ (shimoga) ತಾಲೂಕು ಪಂಚಾಯಿತಿ ಸಭಾಂಗಣಗಳಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಲಿದೆ.

ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

shimoga | Shimoga - An unknown person died in an accident: Traffic police requested to help in tracing the heirs shimoga | ಶಿವಮೊಗ್ಗ - ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ Previous post shimoga | ಶಿವಮೊಗ್ಗ – ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ
shimoga | Shimoga - The lake is bursting due to heavy rain: Will the taluk administration wake up? ಶಿವಮೊಗ್ಗ - ಭಾರೀ ಮಳೆಗೆ ಬಿರುಕು ಬಿಡುತ್ತಿರುವ ಕೆರೆ ಏರಿ : ಎಚ್ಚೆತ್ತುಕೊಳ್ಳುವುದೆ ತಾಲೂಕು ಆಡಳಿತ? Next post shimoga | ಶಿವಮೊಗ್ಗ – ಭಾರೀ ಮಳೆಗೆ ಬಿರುಕು ಬಿಡುತ್ತಿರುವ ಕೆರೆ ಏರಿ : ಎಚ್ಚೆತ್ತುಕೊಳ್ಳುವುದೆ ತಾಲೂಕು ಆಡಳಿತ?