shimoga | A leopard attacked a cow tied in a barn! ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!

shimoga | ಶಿವಮೊಗ್ಗ – ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!

ಶಿವಮೊಗ್ಗ (shivamogga), ಆ. 30: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುವನ್ನು ಚಿರತೆ ದಾಳಿ (leopard attack on cow) ನಡೆಸಿ ಕೊಂದು ಹಾಕಿದ ಘಟನೆ, ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮ (chordi village) ದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಚಂದ್ರಶೇಖರ್ ಎಂಬುವರ ತೋಟದ ಕೊಟ್ಟಿಗೆಯಲ್ಲಿ ಘಟನೆ ನಡೆದಿದೆ. ಕಳೆದ ಮಂಗಳವಾರ ಸಂಜೆ ಚಂದ್ರಶೇಖರ್ ಅವರು ಎಂದಿನಂತೆ ತೋಟದ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿ ಹಾಕಿದ್ದರು.

ಬುಧವಾರ ಬೆಳಿಗ್ಗೆ ಕೊಟ್ಟಿಗೆಗೆ ಆಗಮಿಸಿದಾಗ ಹಸು (cow) ವೊಂದು ಮೃತಪಟ್ಟಿರುವುದು ಗೊತ್ತಾಗಿದ್ದು, ಚಿರತೆ ದಾಳಿ ನಡೆಸಿ, ಹಸುವನ್ನು ಅರ್ಧ ತಿಂದು ಹಾಕಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ (forest departmet) ಅಧಿಕಾರಿ – ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಸದರಿ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

License is mandatory for foodstuff manufacturers and sellers : otherwise Rs 10 lakh will fall Penalty! ಆಹಾರ ಪದಾರ್ಥ ತಯಾರಕರು - ಮಾರಾಟಗಾರರಿಗೆ ಲೈಸೆನ್ಸ್ ಕಡ್ಡಾಯ : ಇಲ್ಲದಿದ್ದರೆ ಬೀಳಲಿದೆ 10 ಲಕ್ಷ ರೂ. ದಂಡ! Previous post shimoga | ಆಹಾರ ಪದಾರ್ಥ ತಯಾರಕರು – ಮಾರಾಟಗಾರರಿಗೆ ಲೈಸೆನ್ಸ್ ಕಡ್ಡಾಯ : ಇಲ್ಲದಿದ್ದರೆ ಬೀಳಲಿದೆ 10 ಲಕ್ಷ ರೂ. ದಂಡ!
thirthahalli | College student suspected of jumping into Tunga river : Search by fire brigade ತೀರ್ಥಹಳ್ಳಿ ತುಂಗಾ ನದಿಗೆ ಕಾಲೇಜು ವಿದ್ಯಾರ್ಥಿ ಹಾರಿದ ಶಂಕೆ : ಅಗ್ನಿಶಾಮಕ ದಳದಿಂದ ಶೋಧ Next post thirthahalli | ತುಂಗಾ ನದಿಗೆ ಕಾಲೇಜು ವಿದ್ಯಾರ್ಥಿ ಹಾರಿದ ಶಂಕೆ : ಅಗ್ನಿಶಾಮಕ ದಳದಿಂದ ಶೋಧ