License is mandatory for foodstuff manufacturers and sellers : otherwise Rs 10 lakh will fall Penalty! ಆಹಾರ ಪದಾರ್ಥ ತಯಾರಕರು - ಮಾರಾಟಗಾರರಿಗೆ ಲೈಸೆನ್ಸ್ ಕಡ್ಡಾಯ : ಇಲ್ಲದಿದ್ದರೆ ಬೀಳಲಿದೆ 10 ಲಕ್ಷ ರೂ. ದಂಡ!

shimoga | ಆಹಾರ ಪದಾರ್ಥ ತಯಾರಕರು – ಮಾರಾಟಗಾರರಿಗೆ ಲೈಸೆನ್ಸ್ ಕಡ್ಡಾಯ : ಇಲ್ಲದಿದ್ದರೆ ಬೀಳಲಿದೆ 10 ಲಕ್ಷ ರೂ. ದಂಡ!

ಶಿವಮೊಗ್ಗ (shivamogga), ಆ. 30: ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಹಾಗೂ ಅದರಡಿ ರಚಿಸಲಾಗಿರುವ ನಿಯಮಗಳು ಮತ್ತು ನಿಬಂಧನೆಗಳು 2011 ಆಗಸ್ಟ್ 5 ರಿಂದ ಜಾರಿಗೆ ಬಂದಿರುತ್ತದೆ. 

ಆಹಾರ ತಯಾರಕರು/ವ್ಯಾಪಾರಿಗಳು ನೋಂದಣಿ / ಪರವಾನಿಗಿs (License) ಪಡೆದಿರಬೇಕು ಇಲ್ಲವಾದಲ್ಲಿ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಇದರ ಉಲ್ಲಂಘನೆಯು ರೂ. 10 ಲಕ್ಷದವರೆಗೆ ದಂಡ ವಿಧಿಸಬಹುದಾದ ಅಪರಾಧವಾಗುತ್ತದೆ. ಇದರಂತೆ ವೆಜ್/ಚಿಕನ್/ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದು ನಿಷೇಧಿಸಲಾಗಿದೆ.

ರಸ್ತೆ ವ್ಯಾಪಾರಿಗಳು ತಳ್ಳುಗಾಡಿ ವ್ಯಾಪಾರಿಗಳ ಗೃಹ ಆಧಾರಿತ ಕ್ಯಾಂಟಿನ್ ಗಳು, ಟೀ ಅಂಗಡಿಗಳು, ತಂಪು ಪಾನೀಯ ತಯಾರಿಕ ಘಟಕಗಳು, ಕ್ಯಾಟರಿಂಗ್, ಕ್ಲಬ್ / ಕ್ಯಾಂಟಿನ್ ಗಳು/ಹೋಂಸ್ಟೇ ಆಹಾರ ವಿತರಕರು/ಶಾಲಾ, ಕಾಲೇಜು ಕ್ಯಾಂಟಿನ್ ಗಳು, ಹೋಟೆಲ್ ರೆಸ್ಟೋರೆಂಟ್ ಗಳು ರೆಸಾರ್ಟ್, ವೈನ್ ಸ್ಟೋರ್ ಗಳು ಬಾರ್ ಮತ್ತು ರೆಸ್ಟೋರೆಂಟ್ ಗಳು ಊಟದ ಸಂಯೋಜಕರು (ಕ್ಯಾಟರರ್ಸ್) 

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮ 2011 ನಿಬಂಧನೆಗಳು ಸಂಖ್ಯೆ 2.1.3 ಶೆಡ್ಯಾಲ್ ಐವಿ ಅನ್ವಯ ನೈರ್ಮಲ್ಯತೆಯಿಂದ ಕೂಡಿರುವ ಸ್ಥಳದಲ್ಲಿ ಗುಣಮಟ್ಟ ಆಹಾರವನ್ನು ತಯಾರಿಸಿ ನೀಡುವುದು ಇಲ್ಲವಾದಲ್ಲಿ ಸೆಕ್ಷನ್ 51, 54,56, 59 ರಂತೆ ಕ್ರಮ ಕೈಗೊಳ್ಳಲಾಗುವುದು.

ಇದರಂತೆ ದಿನಾಂಕ:30.08.2024 ಮತ್ತು 31.08.2024 ರಂದು ಜಿಲ್ಲೆಯಾದ್ಯಂತ ವಿವಿಧ ಬೇಕರಿ ಉತ್ಪನ್ನ ಮೀಟ್ ಚಿಕನ್ ಮತ್ತು ಎಲ್ಲಾ ಉತ್ಪನ್ನಗಳನ್ನು ವಿಶೇಷ ಆಂದೋಲನದ ಮೂಲಕ ವಿಶ್ಲೇಷಣೆಗಾಗಿ ಕಳುಹಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga | Shimoga - Continued ganja hunting: Two youths arrested! ಶಿವಮೊಗ್ಗ - ಮುಂದುವರೆದ ಗಾಂಜಾ ಬೇಟೆ : ಇಬ್ಬರು ಯುವಕರು ಅರೆಸ್ಟ್! Previous post shimoga | ಶಿವಮೊಗ್ಗ – ಮುಂದುವರೆದ ಗಾಂಜಾ ಬೇಟೆ : ಇಬ್ಬರು ಯುವಕರು ಅರೆಸ್ಟ್!
shimoga | A leopard attacked a cow tied in a barn! ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ! Next post shimoga | ಶಿವಮೊಗ್ಗ – ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!