Sigandur: Three youths are missing after the raft sank in Sharavati backwater! ಸಿಗಂದೂರು : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ!

sigandur | ಸಿಗಂದೂರು : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ!

ಸಾಗರ (sagar), ನ. 13: ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ, ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾದ ಘಟನೆ ನ. 13 ಬುಧವಾರ ಸಂಜೆ ನಡೆದಿದೆ.

ಸಂದೀಪ್ (30), ರಾಜು (28) ಹಾಗೂ ಚೇತನ್ (28) ಎಂಬುವರೆ ನಾಪತ್ತೆಯಾದವರೆಂದು ಗುರುತಿಸಲಾಗಿದೆ. ಇದೆ ವೇಳೆ ತೆಪ್ಪದಲ್ಲಿದ್ದ ಇಬ್ಬರು ಯುವಕರು ಈಜಿಕೊಂಡು ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಮರೆಯಾದ ಯುವಕರು ಸ್ಥಳೀಯ ಸಿಗಂದೂರು, ಹುಲಿದೇವರಬನ, ಗಿಣಿವಾರ ಮೂಲದವರಾಗಿದ್ದಾರೆ. ತೆಪ್ಪದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಆಗಮಿಸುವ ವೇಳೆ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕಾರ್ಗಲ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ನಾಪತ್ತೆಯಾಗಿರುವ ಯುವಕರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

The incident took place on Wednesday evening, November 13, when the raft sank and three youths went missing in the Sharavati backwaters of the holebagilu – kalasavalli near Sigandur in Sagar taluk.

Shimoga: Demand for money to issue e-property certificate; Youth Congress protest ಶಿವಮೊಗ್ಗ : ಇ – ಆಸ್ತಿ ಪ್ರಮಾಣಪತ್ರ ನೀಡಲು ಹಣಕ್ಕೆ ಡಿಮ್ಯಾಂಡ್ ; ಯುವ ಕಾಂಗ್ರೆಸ್ ಪ್ರತಿಭಟನೆ Previous post shimoga | ಶಿವಮೊಗ್ಗ : ಇ – ಆಸ್ತಿ ಪ್ರಮಾಣಪತ್ರ ನೀಡಲು ಹಣಕ್ಕೆ ಡಿಮ್ಯಾಂಡ್ ; ಯುವ ಕಾಂಗ್ರೆಸ್ ಪ್ರತಿಭಟನೆ!
Sigandaru: The bodies of three youths who disappeared in Sharavati river were found! ಸಿಗಂದರೂ : ಶರಾವತಿ ನದಿಯಲ್ಲಿ ಕಣ್ಮರೆಯಾಗಿದ್ದ ಮೂವರು ಯುವಕರ ಶವ ಪತ್ತೆ! Next post sigandur | ಸಿಗಂದೂರು : ಶರಾವತಿ ನದಿಯಲ್ಲಿ ಕಣ್ಮರೆಯಾಗಿದ್ದ ಮೂವರು ಯುವಕರ ಶವ ಪತ್ತೆ!