sigandur | ಸಿಗಂದೂರು : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ!
ಸಾಗರ (sagar), ನ. 13: ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ, ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾದ ಘಟನೆ ನ. 13 ಬುಧವಾರ ಸಂಜೆ ನಡೆದಿದೆ.
ಸಂದೀಪ್ (30), ರಾಜು (28) ಹಾಗೂ ಚೇತನ್ (28) ಎಂಬುವರೆ ನಾಪತ್ತೆಯಾದವರೆಂದು ಗುರುತಿಸಲಾಗಿದೆ. ಇದೆ ವೇಳೆ ತೆಪ್ಪದಲ್ಲಿದ್ದ ಇಬ್ಬರು ಯುವಕರು ಈಜಿಕೊಂಡು ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಣ್ಮರೆಯಾದ ಯುವಕರು ಸ್ಥಳೀಯ ಸಿಗಂದೂರು, ಹುಲಿದೇವರಬನ, ಗಿಣಿವಾರ ಮೂಲದವರಾಗಿದ್ದಾರೆ. ತೆಪ್ಪದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಆಗಮಿಸುವ ವೇಳೆ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಕಾರ್ಗಲ್ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ನಾಪತ್ತೆಯಾಗಿರುವ ಯುವಕರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
The incident took place on Wednesday evening, November 13, when the raft sank and three youths went missing in the Sharavati backwaters of the holebagilu – kalasavalli near Sigandur in Sagar taluk.
More Stories
sagara accident news | ಸಾಗರ : ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ – 18 ಜನರಿಗೆ ಗಾಯ!
Sagara: Tourist bus heading to temple overturns – 18 injured!
ಸಾಗರ : ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಪಲ್ಟಿ – 18 ಜನರಿಗೆ ಗಾಯ!
sagara news | ಸಾಗರ | ಸಿಗಂದೂರು ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : 14 ಜನರಿಗೆ ಗಾಯ – ಆಸ್ಪತ್ರೆಗೆ ದಾಖಲು!
Tempo Traveler overturns on Sigandur Road : 14 people injured – admitted to hospital!
ಸಿಗಂದೂರು ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : 14 ಜನರಿಗೆ ಗಾಯ – ಆಸ್ಪತ್ರೆಗೆ ದಾಖಲು!
sagara accident news | ಸಾಗರ | ಮೋರಿ ಕಟ್ಟೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಹಲವರಿಗೆ ಗಾಯ!
Private bus crashes into culvert: Several injured!
ಸಾಗರ – ಮೋರಿ ಕಟ್ಟೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಹಲವರಿಗೆ ಗಾಯ!
sagara | ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!
Sagara city : police take out route march on august 26
ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!
ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ
Peace Committee meeting in Sagar, Shiralakoppa: SP calls for celebrating festivals with harmony
ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ
kargal | ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ!
Police parade in Kargal town!
ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ
