Shimoga: Demand for money to issue e-property certificate; Youth Congress protest ಶಿವಮೊಗ್ಗ : ಇ – ಆಸ್ತಿ ಪ್ರಮಾಣಪತ್ರ ನೀಡಲು ಹಣಕ್ಕೆ ಡಿಮ್ಯಾಂಡ್ ; ಯುವ ಕಾಂಗ್ರೆಸ್ ಪ್ರತಿಭಟನೆ

shimoga | ಶಿವಮೊಗ್ಗ : ಇ – ಆಸ್ತಿ ಪ್ರಮಾಣಪತ್ರ ನೀಡಲು ಹಣಕ್ಕೆ ಡಿಮ್ಯಾಂಡ್ ; ಯುವ ಕಾಂಗ್ರೆಸ್ ಪ್ರತಿಭಟನೆ!

ಶಿವಮೊಗ್ಗ (shivamogga), ನ. 13: ಶಿವಮೊಗ್ಗ ಪಾಲಿಕೆಯಲ್ಲಿ ಇ – ಆಸ್ತಿ ವ್ಯವಸ್ಥೆ ಗೊಂದಲದ ಗೂಡಾಗಿ ಪರಿಣಮಿಸಿದೆ. ನಾಗರೀಕರಿಂದ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಘಟಕವು ನ. 13 ರಂದು ಶಿವಮೊಗ್ಗ ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿತು.

ಇತ್ತೀಚೆಗೆ ರಾಜ್ಯ ಸರ್ಕಾರವು, ಎಲ್ಲ ನಗರ – ಪಟ್ಟಣ ಸ್ಥಳೀಯಾಡಳಿತಗಳಲ್ಲಿ ಇ – ಆಸ್ತಿ ವ್ಯವಸ್ಥೆ ಕಾರ್ಯಗತಗೊಳಿಸಿದೆ. ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಸ್ಥಿರಾಸ್ತಿ ನೊಂದಣಿ, ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಸೇರಿದಂತೆ ನಾನಾ ಆಡಳಿತಾತ್ಮಕ ಕೆಲಸಕಾರ್ಯಗಳಿಗೆ ಸ್ಥಿರಾಸ್ತಿಗೆ ಪಾಲಿಕೆಯ ಇ – ಆಸ್ತಿ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಕಾರಣದಿಂದ ಇ – ಆಸ್ತಿ ಮಾಡಿಸಲು ನಾಗರೀಕರು ಪಾಲಿಕೆಗೆ ದೌಡಾಯಿಸುತ್ತಿದ್ದಾರೆ. ಆದರೆ ಪಾಲಿಕೆಯ ಕಂದಾಯ ವಿಭಾಗದಲ್ಲಿ, ಇ – ಆಸ್ತಿಯ ಬಗ್ಗೆ ನಾಗರೀಕರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕಂದಾಯ ವಿಭಾಗದದ ಮುಖ್ಯಸ್ಥರೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪಾಲಿಕೆಗೆ ಭೇಟಿ ನೀಡಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಬಳಿಯಿರುವ ಕಡತಗಳ ಖುದ್ದು ಪರಿಶೀಲನೆ ನಡೆಸಬೇಕು. ಇ – ಆಸ್ತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲಿಸಬೇಕು. ಹಣಕ್ಕೆ ಬೇಡಿಕೆಯಿಡುತ್ತಿರುವ ಪಾಲಿಕೆ ಕಂದಾಯ ವಿಭಾಗದ ಮುಖ್ಯಸ್ಥರ ವಿರುದ್ದ ಕ್ರಮಕೈಗೊಳ್ಳಬೆಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪ್ರಸ್ತುತ ಕಂದಾಯ ವಿಭಾಗದ ಉಪ ಆಯುಕ್ತರು, ನಿಯಮಕ್ಕೆ ವಿರುದ್ಧವಾಗಿ ಹುದ್ದೆಯಲ್ಲಿರುವ ದೂರುಗಳಿವೆ. ಈ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್, ನಗರಾಧ್ಯಕ್ಷ ಬಿ ಲೋಕೇಶ್, ಎಸ್ ಕುಮಾರೇಶ್, ಪ್ರಧಾನ ಕಾರ್ಯದರ್ಶಿ ರಾಹುಲ್, ಪುಷ್ಪಕ್ ಕುಮಾರ್, ಮೋಹನ್, ರಾಕೇಶ್ ಸೇರಿದಂತೆ ಮೊದಲಾದವರಿದ್ದರು.

The e-property system in Shimoga Corporation has become a nest of confusion. Alleging that money is being demanded from the citizens, the Youth Congress unit staged a protest at the DC office premises in Shimoga city on Wednesday and submitted a petition to the District Collector.

Shimoga Municipal Corporation Area Revision: Why the Negligence of the People's Representatives?! Reporter : B. Renukesh shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಜನಪ್ರತಿನಿಧಿಗಳ ನಿರ್ಲಕ್ಷ್ಯವೇಕೆ?! Previous post shmoga | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಣ್ಮರೆಯಾದ ಜನಸ್ನೇಹಿ ಆಡಳಿತ..!
Sigandur: Three youths are missing after the raft sank in Sharavati backwater! ಸಿಗಂದೂರು : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ! Next post sigandur | ಸಿಗಂದೂರು : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ!