
bhadra dam | ಭದ್ರಾ ಜಲಾಶಯದಿಂದ ಎಡ ನಾಲೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ (shivamogga), ಡಿ. 30: ಭದ್ರಾ ಜಲಾಶಯದಿಂದ ಎಡ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ, ಡಿ. 30 ರ ಸೋಮವಾರ ಶಿವಮೊಗ್ಗ ನಗರದ ಹೊರವಲಯ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಚೇರಿ ಎದುರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪ್ರತಿಭಟನೆ ನಡೆಸಿತು.
ಭದ್ರಾ ಎಡ ನಾಲಾ ಕಾಲುವೆಗೆ 25-11-2024 ರಿಂದ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ 35 ದಿನಗಳಾಗಿವೆ. ಪ್ರಸ್ತುತ ಬೇಸಿಗೆ ಹಂಗಾಮಿನ ಭತ್ತ ಬೆಳೆಯಲು ನೀರಿನ ಅಗತ್ಯವಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಹಾಗೆಯೇ ತೋಟದ ಬೆಳೆಗಳು, ಕಬ್ಬು ಸೇರಿದಮತೆ ಮತ್ತೀತರ ಬೆಳೆಗಳು ನೀರಿನಲ್ಲದೆ ಒಣಗಲಾರಂಭಿಸಿವೆ. ಪ್ರಸ್ತುತ ನೀರು ಹರಿಸಿದರೂ, ನಾಲೆಯ ಕೊನೆಯ ಭಾಗಗಳಿಗೆ ನೀರು ತಲುಪಲು 15 ರಿಂದ 20 ದಿನ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ತಕ್ಷಣವೇ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯಬೇಕು. ತಕ್ಷಣವೇ ನೀರು ಹರಿಸುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಪ್ರಾಧಿಕಾರದ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ ರಾಘವೇಂದ್ರ, ಪ್ರಮುಖರಾದ ಶೇಖರಪ್ಪ, ಜಯದೇವ್, ಕೆಂಡಪ್ಪ, ವೆಂಕಟೇಶ್ ನಾಯ್ಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
On Monday, December 30, Karnataka State Farmers’ Association and Green Sena organized a protest in front of the Bhadra Achukattu Authority office at Malavagoppa on the outskirts of Shimoga city, demanding that water be diverted from the Bhadra reservoir to the left channel.
Water supply to Bhadra left canal has been stopped from 25-11-2024. It has been 35 days already. The protestors said that water is needed to grow paddy in the current summer season.