
shimoga | ಅಬಕಾರಿ ಪೊಲೀಸರ ಕಾರ್ಯಾಚರಣೆ – ಲಕ್ಷಾಂತರ ರೂ. ಮೌಲ್ಯದ ಮದ್ಯದ ಬಾಟಲಿಗಳು ವಶ : ಇಬ್ಬರು ಯುವಕರ ಬಂಧನ!
ಶಿವಮೊಗ್ಗ (shivamogga), ಡಿ. 30: ಯಾವುದೇ ಅನುಮತಿಯಿಲ್ಲದೆ ಬೈಕ್ ವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ ಘಟನೆ ಡಿಸೆಂಬರ್ 30 ರಂದು ಶಿವಮೊಗ್ಗ ನಗರದಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹರೀಶ್ ಹಾಗೂ ಶಿವು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 180 ಮಿಲಿ ಲೀಟರ್ ನ ಮ್ಯಾಕ್ ಡೋವೆಲ್ಸ್ ನಂಬರ್ – 1 ಬ್ರ್ಯಾಂಡ್ ನ 170 ವಿಸ್ಕಿ ಬಾಟಲಿ ಹಾಗೂ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಈ ಸಂಬಂಧ ಸೋಮವಾರ ಅಬಕಾರಿ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟಾರೆ 30,600 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 1.35 ಲಕ್ಷ ರೂ.ಗಳಾಗಿದೆ ಎಂದು ಮಾಹಿತಿ ನೀಡಿದೆ.
ಖಚಿತ ವರ್ತಮಾನದ ಮೇರೆಗೆ ಶಿವಮೊಗ್ಗದ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆಯ ಅಂಡರ್ ಪಾಸ್ ಬಳಿ ಕಾರ್ಯಾಚರಣೆ ನಡೆಸಿ, ಮದ್ಯದ ಬಾಟಲಿಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ.
ದಾವಣಗೆರೆ ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಶಿವಮೊಗ್ಗ ವಿಭಾಗದ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯಲ್ಲಿ ಶಿವಮೊಗ್ಗ ವಲಯ-1 ರ ಅಬಕಾರಿ ನಿರೀಕ್ಷಕರಾದ ಹನುಮಂತಪ್ಪ ಡಿ.ಎನ್, ಉಪ ನಿರೀಕ್ಷಕರಾದ ಚಂದ್ರಪ್ಪ ಎಸ್ ಡಿ,
ಮುಖ್ಯ ಪೇದೆಗಳಾದ ಜಯರಾಜ್ ಡಿ, ಮಹಮ್ಮದ್ ಅಸ್ರಾವುದ್ದೀನ್ ಖಾನ್, ಪೇದೆಗಳಾದ ನಾಗಪ್ಪ ಶಿರೋಳ್, ನಾಗಪ್ಪ, ರವಿ ಹೆಚ್, ನವೀನ್ ಹೆಚ್ ಬಿ ಹಾಗೂ ಇತರ ಅಬಕಾರಿ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shimoga, D. 30: Millions of rupees in a bike without any permission. The incident took place in Shimoga city on December 30 when two youths were arrested by the Excise Police on the charge of carrying a bottle of valuable liquor.
In this regard, the Excise Department issued a press release on Monday. It has been informed that a total of 30,600 liters of liquor has been seized and its estimated value is Rs.1.35 lakh.