Irrigation corporation engineer, office staff who were receiving bribe from contractor Lokayukta right! ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ನೀರಾವರಿ ನಿಗಮದ ಎಂಜಿನಿಯರ್, ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲಗೆ!

ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ನೀರಾವರಿ ನಿಗಮದ ಎಂಜಿನಿಯರ್, ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ!

ಶಿವಮೊಗ್ಗ (shivamogga), ಜ. 1: ಕಾಮಗಾರಿ ಹಣ ಮಂಜೂರಾತಿಗೆ ಗುತ್ತಿಗೆದಾರರೋರ್ವರಿಂದ 1. 20 ಲಕ್ಷ ರೂ. ಲಂಚ ಪಡೆಯುತ್ತಿದ್ದ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತದ ಸೆಕ್ಷನ್ ಆಫೀಸರ್ (ಪ್ರಭಾರ ಎಇಇ) ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಜ. 1 ರಂದು ಸಂಜೆ ನಡೆದಿದೆ.

ಭದ್ರಾ ಯೋಜನಾ ವೃತ್ತದ ಬಿ ಆರ್ ಪಿ ವ್ಯಾಪ್ತಿಯ ಡಿ ಬಿ ಹಳ್ಳಿ ಸೆಕ್ಷನ್ ಆಫೀಸರ್ ಕೊಟ್ರಪ್ಪ ಮತ್ತು ಅವರ ಕಚೇರಿಯ ಲೈಟ್ ಮಜ್ದೂರ್ ಅರವಿಂದ್ ಲೋಕಾಯುಕ್ತ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ.

ಗುತ್ತಿಗೆದಾರನಿಂದ ಕಚೇರಿಯಲ್ಲಿಯೇ ಲಂಚ ಪಡೆಯುವ ವೇಳೆ, ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಆಪಾದಿತರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಎಚ್ ಎಸ್ ಸುರೇಶ್, ಪ್ರಕಾಶ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಘಟನೆ ಹಿನ್ನೆಲೆ : ಬಳ್ಳಾರಿ ನಗರದ ನಿವಾಸಿಯಾದ ಪಿಡಬ್ಲ್ಯೂಡಿ ಕ್ಲಾಸ್ – 2 ಗುತ್ತಿಗೆದಾರ ರವಿ (32) ಎಂಬುವವರೆ ದೂರುದಾರರಾಗಿದ್ದಾರೆ. 2023 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಭದ್ರಾವತಿ ತಾಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಹೂಳು (ಶಿಲ್ಟ್) ತೆಗೆಯುವ ಕಾಮಗಾರಿಯನ್ನು ಇ – ಟೆಂಡರ್ ಮೂಲಕ ಪಡೆದಿದ್ದರು.

2023 ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಆರಂಭಿಸಿ, 2024ನೇ ಜನವರಿ ತಿಂಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಪೂರ್ಣಗೊಳಿಸಿದ್ದರು. ಕಾಮಗಾರಿಯ ಮೊತ್ತ 9,16,999 ರೂ.ಗಳಾಗಿತ್ತು.

ಕಾಮಗಾರಿ ಮಾಡಿದ ಹಣ ಗುತ್ತಿಗೆದಾರನಿಗೆ ಬಿಡುಗಡೆ ಮಾಡಿರಲಿಲ್ಲ. ಹಲವು ಬಾರಿ ಕಚೇರಿಗೆ ಅಲೆದಾಡಿದರು ಪ್ರಯೋಜನವಾಗಿರಲಿಲ್ಲ. ಡಿ ಬಿ ಹಳ್ಳಿಯಲ್ಲಿದ್ದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸೆಕ್ಷನ್ ಆಫೀಸರ್ ಕೊಟ್ರಪ್ಪರನ್ನು 27.12.2024 ರಂದು ಭೇಟಿ ಮಾಡಿದ್ದರು.

ಈ ವೇಳೆ 1. 20 ಲಕ್ಷ ರೂ. ಲಂಚ ನೀಡುವಂತೆ ಕೊಟ್ರಪ್ಪ ಅವರು ಡಿಮ್ಯಾಂಡ್ ಮಾಡಿದ್ದರು. ಲಂಚ ಕೊಡಲು ಇಷ್ಟವಿಲ್ಲದ ಗುತ್ತಿಗೆದಾರನು, ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

1. 20 lakhs from the contractor for sanction of work money. The Bhadra Planning Section Officer (in-charge AEE) of the Karnataka Irrigation Corporation Limited and the office staff were caught by the Lokayukta Police who were accepting bribes. Happened on 1st.

Irrigation corporation engineer, office staff who were receiving bribe from contractor Lokayukta right!ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ನೀರಾವರಿ ನಿಗಮದ ಎಂಜಿನಿಯರ್, ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲಗೆ!

Ownership of 'Kona' left to God, which created controversy between Karnataka and Andhra Pradesh villages! ಕರ್ನಾಟಕ – ಆಂಧ್ರ ಪ್ರದೇಶ ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದ ದೇವರಿಗೆ ಬಿಟ್ಟ‘ಕೋಣ’ದ ಮಾಲೀಕತ್ವ! Previous post ಕರ್ನಾಟಕ – ಆಂಧ್ರ ಪ್ರದೇಶ ಗ್ರಾಮಗಳ ನಡುವೆ ವಿವಾದ ಸೃಷ್ಟಿಸಿದ ದೇವರಿಗೆ ಬಿಟ್ಟ‘ಕೋಣ’ದ ಮಾಲೀಕತ್ವ!
Direct Interview for Assistant Professor Recruitment in Shimoga Veterinary Medical College ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನೇರ ಸಂದರ್ಶನ Next post ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನೇರ ಸಂದರ್ಶನ