
shimoga | ಶಿವಮೊಗ್ಗ : ಪ್ರಮುಖ ರಸ್ತೆಗಳಲ್ಲಿ ರಾರಾಜಿಸಲಿವೆ ‘ಟ್ರಾಫಿಕ್ ಪೊಲೀಸ್ ಕಟೌಟ್..!’
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜ. 7: ಸರ್ವೇಸಾಮಾನ್ಯವಾಗಿ ರಸ್ತೆ, ಸರ್ಕಲ್ ಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟರು, ಮತ್ತೀತರ ಪ್ರಚಾರದ ಕಟೌಟ್ ಗಳು ರಾರಾಜಿಸುತ್ತವೆ. ಆದರೆ ಇನ್ನು ಮುಂದೆ ಶಿವಮೊಗ್ಗದ ಪ್ರಮುಖ ಸರ್ಕಲ್ – ರಸ್ತೆಗಳಲ್ಲಿ ‘ಟ್ರಾಫಿಕ್ ಪೊಲೀಸ’ರ ಕಟೌಟ್ ಗಳು ಕೂಡ ರಾರಾಜಿಸಲಿವೆ..!
ಹೌದು. ಸಂಚಾರಿ ನಿಯಮಗಳ ಪಾಲನೆ ಹಾಗೂ ಜಾಗೃತಿ ಮೂಡಿಸಲು, ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಜೊತೆಗೆ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡ ವಿಧಿಸುವುದು ಸೇರಿದಂತೆ ನಾನ ಕ್ರಮಗಳ ಪಾಲನೆ ಮಾಡುತ್ತದೆ.
ಇದೀಗ ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ವಾಹನ ದಟ್ಟಣೆ ಹೆಚ್ಚಿರುವ, ಅಪಘಾತ ವಲಯ ಸರ್ಕಲ್ ಹಾಗೂ ರಸ್ತೆಗಳಲ್ಲಿ ‘ಟ್ರಾಫಿಕ್ ಪೊಲೀಸ್ ಕಟೌಟ್’ ನಿಲ್ಲಿಸಲಾರಂಭಿಸಿದೆ! ಈ ಮೂಲಕ ವಾಹನ ಚಾಲಕರ ಗಮನ ಸೆಳೆಯುವ ವಿನೂತನ ಕ್ರಮಕ್ಕೆ ಮುಂದಾಗಿದೆ.
ಜ. 7 ರ ಮಂಗಳವಾರ ಶಿವಮೊಗ್ಗ ನಗರದ ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯ ಸರ್ಕಾರಿ ಶಾಲೆ ಸರ್ಕಲ್, ಮಹೇಂದ್ರ ಶೋ ರೂಂ ಮುಂಭಾಗದ ಕ್ರಾಸ್, ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಕ್ರಾಸ್ ಹಾಗೂ ಸೂಳೇಬೈಲು ರಸ್ತೆಯಲ್ಲಿ ‘ಟ್ರಾಫಿಕ್ ಪೊಲೀಸ್ ಕಟೌಟ್’ ಗಳನ್ನು ನಿಲ್ಲಿಸಲಾಗಿದೆ.
ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ‘ಟ್ರಾಫಿಕ್ ಪೊಲೀಸ್ ಕಟೌಟ್’ ನಿಲುಗಡೆ ಮಾಡಿದ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಟ್ರಾಫಿಕ್ ಪೊಲೀಸರ ವಿನೂತನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸುರೇಶ್ ಬಿ, ಟ್ರಾಫಿಕ್ ಇನ್ಸ್’ಪೆಕ್ಟರ್ ಡಿ ಕೆ ಸಂತೋಷ್ ಕುಮಾರ್, ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಸೇರಿದಂತೆ ಟ್ರಾಫಿಕ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಿಫ್ಲೆಕ್ಟ್ : ನಿಧಾನವಾಗಿ ಚಲಿಸಿ (ಗೋ ಸ್ಲೋ) ಎಂಬ ಘೋಷ ವಾಕ್ಯ ತೋರ್ಪಡಿಸುವ ಆಳೆತ್ತರದ ‘ಟ್ರಾಫಿಕ್ ಪೊಲೀಸ್ ಕಟೌಟ್’ ಗಳು ದೂರದಿಂದ ನೋಡಿದರೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಂತೆ ಗೋಚರಿಸುತ್ತದೆ. ಸದರಿ ಕಟೌಟ್ ಗಳು ರಿಫ್ಲೆಕ್ಟ್ (ಪ್ರತಿಫಲನ) ಆಗುವುದರಿಂದ, ಸಂಜೆ ಹಾಗೂ ರಾತ್ರಿಯ ವೇಳೆ ವಾಹನದ ಹೆಡ್ ಲೈಟ್ ಬೆಳಕಿಗೆ ಗೋಚರಿಸುತ್ತವೆ.
‘ಟ್ರಾಫಿಕ್ ಪೊಲೀಸ್ ಕಟೌಟ್’ ಗಳು ಅಪಘಾತ ವಲಯ ಪ್ರದೇಶಗಳಲ್ಲಿ, ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಇದು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
Shivamogga, january. 7: Usually there are cut-outs of politicians, movie actors, etc in the streets, circles. But from now on the important circle-roads of Shimoga will also have cutouts of ‘traffic police’..!
Shivamogga West Traffic Station Police has started stopping ‘Traffic Police Cutout’ in the accident zone circles and roads where the traffic is high! Through this, an innovative measure has been taken to attract the attention of motorists.
On Tuesday, January 7, ‘traffic police cut-outs’ were erected at Gadikoppa National Highway Government School Circle, Cross in front of Mahendra Showroom, Government Megan Hospital Cross and Sulebailu Road in Shimoga city.