shimoga | ರಸ್ತೆಗಳಲ್ಲಿ ಅಶಕ್ತ ಮಹಿಳೆಯರು : ಕಣ್ಮುಚ್ಚಿ ಕುಳಿತಿವೆಯೇ ಇಲಾಖೆಗಳು?
ಶಿವಮೊಗ್ಗ (shivamogga), ಜ. 16: ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಅದರಲ್ಲಿಯೂ ಅಶಕ್ತ, ನಿರ್ಗತಿಕ ಮಹಿಳೆಯರ ಶ್ರೇಯೋಭಿವೃದ್ದಿಗೆ, ಸರ್ಕಾರಗಳು ಕೋಟ್ಯಾಂತರ ರೂ. ವ್ಯಯಿಸುತ್ತವೆ. ಹಾಗೆಯೇ ಮಹಿಳೆಯರಿಗೆ ನೆರವಾಗಲೆಂದೆ ಹಲವು ಸಂಘಸಂಸ್ಥೆಗಳು ಕೂಡ ಕಾರ್ಯನಿರ್ವಹಣೆ ಮಾಡುತ್ತಿವೆ.
ಆದರೆ ಶಿವಮೊಗ್ಗ ನಗರದ ರಸ್ತೆ, ಬೀದಿಗಳಲ್ಲಿ ಭಿಕ್ಷೆ ಬೇಡಿ, ದೈನೇಸಿ ಜೀವನ ನಡೆಸುತ್ತಿರುವ ಅಶಕ್ತ ಮಹಿಳೆಯರು ಮಾತ್ರ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘಸಂಸ್ಥೆಗಳ ಕಣ್ಣಿಗೆ ಬೀಳದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ!
ಶಿವಮೊಗ್ಗದ ಖಾಸಗಿ, ಕೆಎಸ್ಆರ್’ಟಿಸಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಅಶಕ್ತ, ವಯೋವೃದ್ದ ಮಹಿಳೆಯರು ನಿಯಮಿತವಾಗಿ ಕಂಡುಬರುತ್ತಿರುತ್ತಾರೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಇದರಲ್ಲಿ ಕೆಲವರು ನಾನಾ ರೋಗರುಜುನಗಳಿಂದ ಬಳಲುತ್ತಿದ್ದಾರೆ.
ಆದರೆ ಇಂತಹ ಮಹಿಳೆಯರಿಗೆ ನೆರವಾಗುವ ಕನಿಷ್ಠ ಮಾನವೀಯತೆ, ಕಳಕಳಿ ಸಂಬಂಧಿಸಿದ ಇಲಾಖೆಗಳು ಪ್ರದರ್ಶಿಸುತ್ತಿಲ್ಲ. ಇದರಿಂದ ಅದೆಷ್ಟೋ ಮಹಿಳೆಯರು, ಅಶಕ್ತರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಸಂಕಷ್ಟಮಯ ಜೀವನ ನಡೆಸುವಂತಾಗಿದೆ. ಕಾಲಾಂತರದಲ್ಲಿ ಇಹಲೋಕ ತ್ಯಜಿಸುವಂತಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ನೋವು ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ಶಿವಮೊಗ್ಗ ನಗರದ ಕೆಎಸ್ಆರ್’ಟಿಸಿ ಬಸ್ ನಿಲ್ದಾಣ ಸುತ್ತಮುತ್ತ ಕೆಲ ಅಶಕ್ತ ಮಹಿಳೆಯರು ಬೀಡುಬಿಟ್ಟಿರುವುದು ಕಂಡುಬರುತ್ತಿದೆ. ಆದಾಗ್ಯೂ ಸಂಬಂಧಿಸಿದ ಇಲಾಖೆಗಳ ಇಂತಹವರಿಗೆ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವ ಗೋಜಿಗೆ ಮುಂದಾಗುತ್ತಿಲ್ಲ.
ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಣೆ ಮಾಡಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.
There are many laws to protect women. In that, for the career development of the weak and needy women, governments have spent crores of rupees spend. Also, many organizations are working to help women.
But it is really ironic that only the disabled women who live a begging life on the streets of Shimoga city do not catch the eye of the relevant departments and organizations!
Disabled and elderly women are regularly seen in many places, including the private KSRTC bus station in Shimoga. They are living without alms. Some of them are suffering from various diseases.
