
shimoga | ಶಿವಮೊಗ್ಗ : ವಾಹನ ಸವಾರರ ಕೈಗೆ ಫ್ರೆಂಡ್ ಶಿಫ್ ಬ್ಯಾಂಡ್ – ಕಾರಣವೇನು?
ಶಿವಮೊಗ್ಗ (shivamogga), ಜ. 19: ಸಂಚಾರಿ ನಿಯಮಗಳ ಜಾಗೃತಿ ಹಾಗೂ ಕಟ್ಟುನಿಟ್ಟಿನ ಪಾಲನೆ ಮಾಡುವ ಕುರಿತಂತೆ ಅರಿವು ಮೂಡಿಸಲು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಾಹನ ಸವಾರರ ಕೈಗೆ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟುವ ಮೂಲಕ ವಿನೂತನವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ರಾಷ್ಟ್ರಿಯ ರಸ್ತೆ ಸುರಕ್ಷತಾ ಮಾಸ – 2025 ರ ಅಂಗವಾಗಿ, ಜ. 18 ರಂದು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ, ಶಿವಮೊಗ್ಗ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದ ವೇಳೆ ವಿದ್ಯಾರ್ಥಿಗಳ ವಿನೂತನ ಕ್ರಮ ನಾಗರೀಕರ ಗಮನ ಸೆಳೆಯಿತು.
ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರ ಕೈಗೆ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟಿದ ವಿದ್ಯಾರ್ಥಿಗಳು, ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡರು.
ಪಾಲಿಸಿ : ಜಾಥಾಕ್ಕೂ ಮುನ್ನ ಬಿ ಹೆಚ್ ರಸ್ತೆಯಲ್ಲಿರುವ ಸ್ಕೌಟ್ಸ್ ಭವನದಲ್ಲಿ ವೇದಿಕೆ ಸಮಾರಂಭ ಆಯೋಜನೆಯಾಗಿತ್ತು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪುಟ್’ಪಾತ್ ಮಾರ್ಗದಲ್ಲಿಯೇ ಪಾದಚಾರಿಗಳು ಸಂಚರಿಸಬೇಕು. ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರಿಬ್ಬರು ಕೂಡ ಸುರಕ್ಷತೆಯ ದೃಷ್ಟಿಯಿಂದ, ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಹೆಲ್ಮೆಟ್ ಧರಿಸಬೇಕು’ ಎಂದು ಸಲಹೆ ನೀಡಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾವುದೇ ಸಂದರ್ಭಗಳಲ್ಲಿಯೂ, ವಾಹನ ಚಾಲನೆ ಮಾಡಬಾರದು. ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ವಾಹನ ಚಲಾಯಿಸಲು ಮಾನ್ಯತೆ ಇರುವ ಮತ್ತು ಚಾಲ್ತಿಯಲ್ಲಿರುವ, ಡ್ರೈವಿಂಗ್ ಲೈಸೈನ್ಸ್ ಹೊಂದಿರಬೇಕು. ನಿಯಮಾನುಸಾರ ವಾಹನ ಚಾಲನಾ ಪರವಾನಿಗೆ ಪಡೆದ ನಂತರವಷ್ಟೆ, ವಾಹನ ಚಲಾಯಿಸಬೇಕು ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಂತರ ಸ್ಕೌಟ್ಸ್ ಭವನದಿಂದ ಕಾಲ್ನಡಿಗೆ ಜಾಗೃತಿ ಜಾಥಾ ಆರಂಭವಾಯಿತು. ಬಿ ಹೆಚ್ ರಸ್ತೆ ಮಾರ್ಗವಾಗಿ ಆಗಮಿಸಿ ಗೋಪಿ ವೃತ್ತದಲ್ಲಿ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ್, ಡಿವೈಎಸ್ಪಿ ಸಂಜೀವ್ ಕುಮಾರ್, ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಸ್ಕೌಟ್ಸ್ – ಗೈಡ್ಸ್ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
To create awareness and strict adherence about to traffic rules, students of Scouts and Guides carried out an innovative awareness campaign by tying friendship bands on the hands of motorists.
As part of the National Road Safety Month – 2025, the district police department and Bharat Scouts and Guides organized an awareness jatha in Shimoga city on January 18, when the students’ innovative action caught the attention of the citizens.
Students tied friendship bands on the hands of motorists on major roads and requested them to follow the traffic rules compulsorily.