Shimoga: On which days in 2025 meat sale will be banned? shimoga | ಶಿವಮೊಗ್ಗ : 2025 ನೇ ಸಾಲಿನಲ್ಲಿ ಯಾವೆಲ್ಲ ದಿನಗಳಂದು ಮಾಂಸ ಮಾರಾಟ ನಿಷೇಧ?

shimoga | ಶಿವಮೊಗ್ಗ : 2025 ನೇ ಸಾಲಿನಲ್ಲಿ ಯಾವೆಲ್ಲ ದಿನಗಳಂದು ಮಾಂಸ ಮಾರಾಟ ನಿಷೇಧ?

ಶಿವಮೊಗ್ಗ (shivamogga), ಜ. 29: ಶಿವಮೊಗ್ಗ ಮಹಾನಗರ ಪಾಲಿಕೆಯು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 2025 ನೇ ಸಾಲಿನಲ್ಲಿ, ಈ ಕೆಳಕಂಡ ದಿನಾಂಕಗಳಂದು ಮಾಂಸ ರಹಿತ ದಿನವೆಂದು ಘೋಷಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ವಿವರ : ಜನವರಿ 30 ರಂದು ಸರ್ವೋದಯ ದಿನ, ಫೆಬ್ರವರಿ 26 ಮಹಾಶಿವರಾತ್ರಿ, ಏಪ್ರಿಲ್ 06  ರ ಶ್ರೀರಾಮ ನವಮಿ ದಿನ, ಏಪ್ರಿಲ್ 10  ರ ಮಹಾವೀರ ಜಯಂತಿ ದಿನ,

ಮೇ 12 ರ ಬುದ್ಧಪೂರ್ಣಿಮೆ ಜಯಂತಿ ದಿನ, ಆಗಸ್ಟ್ 16 ರ ಶ್ರೀಕೃಷ್ಣ ಜನ್ಮಾಷ್ಟಮಿ ದಿನ, ಆಗಸ್ಟ್ 27 ರ ಗಣೇಶ ಚತುರ್ಥಿ ದಿನ, ಅಕ್ಟೋಬರ್ 02 ರ ಗಾಂಧಿ ಜಯಂತಿ ದಿನ ಹಾಗೂ ನವೆಂಬರ್ 25 ರ ಸೈಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ.

ಈ ಮೇಲ್ಕಂಡ ದಿನಗಳಂದು ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ, ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಆದ್ದರಿಂದ ಮಾಂಸ ಮಾರಾಟದ ಮಾಲೀಕರು ಮೇಲ್ಕಂಡ ದಿನಾಂಕಗಳಂದು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

Shimoga, January 29: The Shimoga Municipal Corporation has declared Meat Free Day in 2025 on the following dates in Shimoga city limits. A press release has been issued in this regard.

Therefore, the owners of meat shops should close their business on the above dates and cooperate. The Commissioner of Shimoga Municipal Corporation announced that appropriate legal action will be taken against shop owners who violate the order.

shimoga | Shimoga : MLC Balkeesh Banu sudden visit to government school! shimoga | ಶಿವಮೊಗ್ಗ : ಸರ್ಕಾರಿ ಶಾಲೆಗೆ ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ದಿಢೀರ್ ಭೇಟಿ! Previous post shimoga | ಶಿವಮೊಗ್ಗ : ಸರ್ಕಾರಿ ಶಾಲೆಗೆ ಶಾಸಕಿ ಬಲ್ಕೀಶ್ ಬಾನು ದಿಢೀರ್ ಭೇಟಿ!
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ಜ. 30 ರಂದು ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ?