shimoga | Illegal sand mining in Tungabhadra river: Late night sudden attack on female officer! shimoga | ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ : ತಡರಾತ್ರಿ ಮಹಿಳಾ ಅಧಿಕಾರಿಯ ದಿಢೀರ್ ದಾಳಿ!

shimoga | ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ : ತಡರಾತ್ರಿ ಮಹಿಳಾ ಅಧಿಕಾರಿಯ ದಿಢೀರ್ ದಾಳಿ!

ಶಿವಮೊಗ್ಗ (shivamogga), ಫೆ. 5: ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಪ್ರಿಯಾ ಅವರು ದಿಢೀರ್ ದಾಳಿ ನಡೆಸಿದ ಘಟನೆ ಫೆ. 4 ರ ರಾತ್ರಿ ನಡೆದಿದೆ.

ತಡರಾತ್ರಿ ಸರಿಸುಮಾರು 12. 30 ರ ವೇಳೆಗೆ ಈ ದಾಳಿ ನಡೆದಿದೆ. ಈ ವೇಳೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲು ಪ್ರಿಯಾ ಅವರು ಮುಂದಾಗಿದ್ದಾರೆ.

ಆದರೆ ಕೆಲ ದಂಧೆಕೋರರು ವಾಹನ ನಿಲ್ಲಸದೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದಾಗ್ಯೂ ಸಿನಿಮೀಯ ಶೈಲಿಯಲ್ಲಿ ಜೆಸಿಬಿಯೊಂದನ್ನು ಪ್ರಿಯಾ ಅವರು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ತದನಂತರ ನಗರದ ಹೊರವಲಯ ಅಬ್ಬಲಗೆರೆ ಬಳಿ, ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಕೂಡ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ಎರಡು ಪ್ರಕರಣ ಕುರಿತಂತೆ ಇನ್ನಷ್ಟೆ ದೂರುಗಳ ದಾಖಲಾಗಬೇಕಾಗಿದೆ ಎಂದು ತಿಳಿದುಬಂದಿದೆ.

ಮೆಚ್ಚುಗೆ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿಯಾಗಿರುವ ಪ್ರಿಯಾ ಅವರು, ತಡರಾತ್ರಿ ಏಕಾಂಗಿಯಾಗಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಸದರಿ ಮಹಿಳಾ ಅಧಿಕಾರಿಗೆ ಸೂಕ್ತ ರಕ್ಷಣೆ ನೀಡಬೇಕೆಂಬ ಆಗ್ರಹ ನಾಗರೀಕರದ್ದಾಗಿದೆ.

Shimoga, February 5: An incident took place on the night of February 4 when Priya, a female officer of the Department of Mines and Geology, suddenly attacked an illegal sand mining block in the Tungabhadra river in Hadonahalli village of Shimoga taluk. The attack took place late at night around 12.30 pm. At this time, Priya has come forward to seize the vehicles involved in illegal sand mining.

But some smugglers fled from the place without stopping the vehicle. However, it is revealed that Priya has succeeded in capturing a JCB in cinematic fashion.

Appreciation: Priya, who is a geologist officer in the Department of Mines and Geology, raided the illegal sand bar alone late at night and uncovered the illegal activity, which has been appreciated in the public sector. It is the demand of the citizens that the district administration and the police department should provide adequate protection to the woman officer.

shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Previous post shimoga | ಶಿವಮೊಗ್ಗ ನಗರದ 40 ಕ್ಕೂ ಅಧಿಕ ಪ್ರದೇಶಗಳಲ್ಲಿ ಫೆ. 6 ರಂದು ವಿದ್ಯುತ್ ವ್ಯತ್ಯಯ!
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ ತಾಲೂಕಿನ ಈ ಗ್ರಾಮಗಳಲ್ಲಿ ಫೆ. 6 ರಂದು ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ!