shimoga | ಶಿವಮೊಗ್ಗ : ಶಾಲಾ – ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕೇಸ್!

Shimoga: Case against shops selling tobacco products near schools and colleges! shimoga | ಶಿವಮೊಗ್ಗ : ಶಾಲಾ – ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕೇಸ್!

ಶಿವಮೊಗ್ಗ (shivamogga), ಫೆ. 21: ಶಾಲಾ – ಕಾಲೇಜುಗಳ 100 ಅಡಿ ಸುತ್ತಳತೆಯಲ್ಲಿ, ನಿಯಮಕ್ಕೆ ವಿರುದ್ಧವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಕೇಸ್ ದಾಖಲಿಸಿದ ಘಟನೆ ಫೆ. 20 ರಂದು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ಫೆ. 20 ರಂದು ಜಿಲ್ಲೆಯಾದ್ಯಂತ ಕೋಟ್ಪಾ ಕಾರ್ಯಾಚರಣೆ ನಡೆಸಲಾಗಿದೆ.

ಡಿವೈಎಸ್ಪಿಗಳ ಮೇಲ್ವಿಚಾರಣೆಯಲ್ಲಿ ಆಯಾ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಗಳ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದೆ.

ಶಾಲಾ – ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ, ಬೇಕರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಶಿವಮೊಗ್ಗ ಎ ಉಪ ವಿಭಾಗದಲ್ಲಿ – 145, ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 142, ಭದ್ರಾವತಿ ಉಪ ವಿಭಾಗದಲ್ಲಿ 123, ಸಾಗರ ಉಪ ವಿಭಾಗದಲ್ಲಿ 84, ಶಿಕಾರಿಪುರ ಉಪ ವಿಭಾಗದಲ್ಲಿ 50,

ತೀರ್ಥಹಳ್ಳಿ ಉಪ ವಿಭಾಗದಲ್ಲಿ 82 ಸೇರಿದಂತೆ ಒಟ್ಟಾರೆ 626 ಕೋಟ್ಪಾ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Shimoga, Feb 21: The police suddenly raided shops selling tobacco products against the rules within 100 feet of schools and colleges and registered a case. It happened in different places of Shimoga district on 20th.

The district police department has issued a notification in this regard. Kotpa operation was conducted across the district on February 20. It has been informed that the operations of inspectors and sub-inspectors of respective stations have been conducted under the supervision of DySPs.

It has been informed that the operations of inspectors and sub-inspectors of respective stations have been conducted under the supervision of DySPs.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →