shimoga | ಶಿವಮೊಗ್ಗ : ಶಿವರಾತ್ರಿ ಜಾತ್ರಾ ಮಹೋತ್ಸವ - ವಾಹನಗಳ ಸಂಚಾರ ಮಾರ್ಗ ಬದಲಾವಣೆ! Shimoga: Shivratri Jatra celebration - change of traffic route of vehicles!

shimoga | ಶಿವಮೊಗ್ಗ : ಶಿವರಾತ್ರಿ ಜಾತ್ರಾ ಮಹೋತ್ಸವ – ವಾಹನಗಳ ಸಂಚಾರ ಮಾರ್ಗ ಬದಲಾವಣೆ!

 ಶಿವಮೊಗ್ಗ (shivamogga), ಫೆ. 25: ಶಿವಮೊಗ್ಗ ನಗರದ ಹೊರವಲಯ ಹರಕೆರೆ ಗ್ರಾಮದಲ್ಲಿ ಫೆ. 26 ಮತ್ತು ಫೆ. 27 ರಂದು ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಫೆ. 26 ರ ಬೆಳಗ್ಗಿನ ಜಾವ 4 ರಿಂದ ಫೆ.  27 ರ ಬೆಳಗಿನ ಜಾವದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಹಾಗೆಯೇ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಸಾಕಷ್ಟು  ಭಕ್ತಾದಿಗಳು ಆಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಫೆ. 26 ರ ಬೆಳಗಿನ ಜಾವ 4 ಗಂಟೆಯಿಂದ ಫೆ. 27 ರ ಬೆಳಗಿನ ಜಾವದವರೆಗೆ, ಈ  ಕೆಳಗಿನ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿ ಆದೇಶ ನೀಡಿದ್ದಾರೆ.

ವಿವರ : ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಸಾಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್. ಹೆಚ್. ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.

ಹಾಗೆಯೇ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಎನ್. ಹೆಚ್. ರಸ್ತೆಯ ಪಕ್ಕದ ರಸ್ತೆಯ ಮೂಲಕ, ರಾಮಿನಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರಬೇಕು ಎಂದು ತಿಳಿಸಲಾಗಿದೆ.

Shimoga, Feb 25: A Jatra Mahotsav will be held in Harakere village on the outskirts of Shimoga city on February 26 and February 27 at the Rameswara Swamy temple on the occasion of Shivratri festival. In this background, a large number of devotees will arrive from 4 AM on 26th February to 4 AM on 27th February. Also, a lot of devotees will arrive at the Malleshwar temple on Sulebailu Hill.

Details: Vehicles plying from Shimoga via Tirthahalli will take the road next to Gajanan Garage and join the road next to NH Hospital via Raminakoppa channel. Also it has been informed that all the vehicles coming from Tirthahalli to Shimoga should come to Shimoga through the side road of NH Hospital Road, Raminakoppa channel cross through Gajana garage and join Shimoga.

shimoga | Shimoga: Dangerous roads near schools - Children's Welfare Committee President's visit! shimoga | ಶಿವಮೊಗ್ಗ : ಶಾಲೆಗಳ ಸಮೀಪ ಅಪಾಯಕಾರಿ ಹೆದ್ಧಾರಿಗಳು - ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಭೇಟಿ! Previous post shimoga | ಶಿವಮೊಗ್ಗ : ಶಾಲೆಗಳ ಸಮೀಪ ಅಪಾಯಕಾರಿ ಹೆದ್ಧಾರಿಗಳು – ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಭೇಟಿ!
Shivamogga: Murder case accused gets stiff prison sentence! ಶಿವಮೊಗ್ಗ : ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ! Next post bhadravati | ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ! : ಕಾರಣವೇನು?