Sagara | Demand for adequate power supply during PUC, SSLC exams! sagara | ಪಿಯುಸಿ, ಎಸ್ಎಸ್ಎಲ್’ಸಿ  ಪರೀಕ್ಷೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ!

sagara | ಸಾಗರ : ಪಿಯುಸಿ, ಎಸ್ಎಸ್ಎಲ್’ಸಿ  ಪರೀಕ್ಷೆ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ!

ಸಾಗರ (sagar), ಮಾ. 9: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ, ಸಾಗರ ತಾಲೂಕಿನ ಭಾರಂಗಿ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಿಗೆ, ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಾಗರ ತಾಲೂಕಿನ ಮುಖಂಡ ಅಶೋಕ ಬೇಳೂರು ನೇತೃತ್ವದ ನಿಯೋಗ ಹುಬ್ಬಳ್ಳಿಯ ಹೆಸ್ಕಾಂ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದೆ.

ಮತ್ತೊಂದೆಡೆ, ಈ ಸಂಬಂಧ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕೂಡ ಹೆಸ್ಕಾಂ ಎಂಡಿಗೆ ಪತ್ರ ಬರೆದಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಸಮರ್ಪಕ ವಿದ್ಯುತ್ : ಸಾಗರ ತಾಲೂಕಿನ ಭಾರಂಗಿ ಹೋಬಳಿಯ ನಾಗವಳ್ಳಿ, ನೆಲಹರಿ, ಗುಡ್ಡೆಹಿತ್ಲು, ಬಾಳಿಗಾ ಸುತ್ತಮುತ್ತಲಿನ ಗ್ರಾಮಗಳಿಗೆ ಹೆಸ್ಕಾಂ ವ್ಯಾಪ್ತಿಯ ಭಟ್ಕಳದಿಂದ ಪೂರೈಕೆಯಾಗುವ ವಿದ್ಯುತ್ ಅವಲಂಬಿಸಿವೆ. ಸದರಿ ಗ್ರಾಮಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ವಾಸಿಸುತ್ತಿವೆ.

ಆದರೆ ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ, ಒಣಗಲಾರಂಭಿಸಿವೆ.

ಮತ್ತೊಂದೆಡೆ, ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇಷ್ಟರಲ್ಲಿಯೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿವೆ. ಅಸಮಪರ್ಕ ವಿದ್ಯುತ್ ಪೂರೈಕೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಅಡೆತಡೆಯಾಗಿದೆ ಎಂದು ಆರೋಪಿಸಲಾಗಿದೆ.

ಈ ಕಾರಣದಿಂದ ಭಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಈ ಮೂಲಕ ನಾಗರೀಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಮನವಿ ಅರ್ಪಿಸುವ ವೇಳೆ ಸ್ಥಳೀಯ ಮುಖಂಡರಾದ ವಾಸು, ಚಂದ್ರಶೇಖರ್, ವೀರಪ್ಪ, ವೆಂಕಟೇಶ್, ಮಂಜುನಾಥ್, ದೇವೇಂದ್ರ, ಲಿಂಗರಾಜ್ ಸೇರಿದಂತೆ ಮೊದಲಾದವರಿದ್ದರು.

Sagar, Mar 9: In the wake of the SSLC and PUC exams, a delegation led by Sagar taluk leader Ashok Belur has submitted a petition to the chief officers of HESCOM, Hubballi, requesting that steps be taken to ensure adequate electricity supply to the villages surrounding Bharangi Hobli in Sagar taluk.

On the other hand, Sagar assembly constituency MLA Gopalakrishna Belur has also written a letter to the HESCOM MD in this regard, urging him to take steps to ensure adequate power supply.

shimoga | Shimoga Corporation water supply outsourcing employees' strike ends! shimoga | ಶಿವಮೊಗ್ಗ ಪಾಲಿಕೆ ನೀರು ಸರಬರಾಜು ಹೊರಗುತ್ತಿಗೆ ನೌಕರರ ಮುಷ್ಕರ ಅಂತ್ಯ! Previous post shimoga | ಶಿವಮೊಗ್ಗ ಪಾಲಿಕೆ ನೀರು ಸರಬರಾಜು ಹೊರಗುತ್ತಿಗೆ ನೌಕರರ ಮುಷ್ಕರ ಅಂತ್ಯ!
shimoga | Police Department Marathon held successfully in Shimoga city! shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಇಲಾಖೆ ಮ್ಯಾರಥಾನ್! Next post shimoga | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಪೊಲೀಸ್ ಮ್ಯಾರಥಾನ್!