
shimoga | ಶಿವಮೊಗ್ಗ : ಮಾ.11 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ!
ಶಿವಮೊಗ್ಗ (shivamogga), ಮಾ. 10: ಶಿವಮೊಗ್ಗ ನಗರದ ಹೊರವಲಯ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ, ಹೆಚ್ಚುವರಿ ಕಂಬ ಅಳವಡಿಸುವ ಕಾಮಗಾರಿಯನ್ನು ಮಾ. 11 ರಂದು ಮೆಸ್ಕಾಂ ಹಮ್ಮಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾ. 11 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಪುರಲೆ ಫೀಡರ್ – 5 ರ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಮಲವಗೊಪ್ಪ ಚಾನಲ್ ರಸ್ತೆ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಚೇರಿ, ಕಾಡಾ ಆಫೀಸ್ ರಸ್ತೆ, ಮಾರಿಯಮ್ಮ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, Mar 10: Within the limits of the MRS Electricity Distribution Center on the outskirts of Shivamogga city, MESCOM has started the work of installing additional poles on Mar 11.
A press release has been issued in this regard. MESCOM has stated that due to the work, there will be disruption in power supply in the following areas under Purale Feeder-5 from 10 am to 5 pm on March 11.
Details: There will be power outages in Malavagoppa Channel Road, Bhadra Achukattu Authority Office, Kada Office Road, Mariamma Colony and surrounding areas. The MESCOM announcement has asked the public to cooperate.