milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ!

milk price hike | Nandini milk price hike: More burden on consumers! milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ!

ಬೆಂಗಳೂರು (bengaluru), ಮಾ. 27: ರಾಜ್ಯ ಸರ್ಕಾರ ಮತ್ತೊಂದು ದರ ಏರಿಕೆಯ ಶಾಕ್ ನೀಡಿದೆ. ಕೊನೆಗೂ ಕೆಎಂಎಫ್ ನ ನಂದಿನಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಮಾ. 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 4 ರೂ. ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿದೆ.

ಲೀಟರ್ ಗೆ 5 ರೂ. ಏರಿಕೆ ಮಾಡಬೇಕೆಂಬ ಆಗ್ರಹ ಹಾಲು ಒಕ್ಕೂಟಗಳದ್ದಾಗಿತ್ತು. ಈ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು, ಅಂತಿಮವಾಗಿ 4 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ಇನ್ನೂ ವರ್ಷವಾಗಿಲ್ಲ. ಅದಾಗಲೇ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಿರುವುದಕ್ಕೆ ನಾಗರೀಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

Bengaluru, Mar. 27: The state government has given another price hike shock. Finally, the price of KMF’s Nandini milk has been increased. The decision to increase the price of milk was taken in the cabinet meeting held on Mar 27.

In a cabinet meeting held at Vidhana Soudha under the chairmanship of CM Siddaramaiah, it was decided to increase the price of milk by Rs 4 per liter.

It hasn’t even been a year since increased the price of Nandini milk. Already, there is objection in the civil society to the decision to increase the price of milk again. #milkpricehike, #nandini, #nandinimilk,

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →