shimoga | Shivamogga | When is the last date for registration of Yashaswini Yojana? What are the facilities? shimoga | ಶಿವಮೊಗ್ಗ | ಯಶಸ್ವಿನಿ ಯೋಜನೆ ನೊಂದಣಿಗೆ ಕೊನೆ ದಿನಾಂಕ ಯಾವಾಗ? ಸೌಲಭ್ಯಗಳೇನು?

shimoga | ಶಿವಮೊಗ್ಗ | ಯಶಸ್ವಿನಿ ಯೋಜನೆ ನೊಂದಣಿಗೆ ಕೊನೆ ದಿನಾಂಕ ಯಾವಾಗ? ಸೌಲಭ್ಯಗಳೇನು?

ಶಿವಮೊಗ್ಗ (shivamogga), ಮಾ. 27: ಸಹಕಾರ ಇಲಾಖೆಯು 2024-25 ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದು, ಮಾ.31 ಕೊನೆಯ ದಿನಾಂಕವಾಗಿದೆ.

ಈ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಒದಗಿಸಲಾಗುತ್ತದೆ.

ಯೋಜನೆಯಡಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು 5 ಲಕ್ಷ ರೂ. ನಿಗದಿಪಡಿಸಲಾಗಿದ್ದು, 1 ಏಪ್ರಿಲ್ 2025 ರಿಂದ 31 ಮಾರ್ಚ್ 2026ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ.

ಜಿಲ್ಲೆಯ ಸಹಾಕರ ಸಂಘಗಳ ಸದಸ್ಯರುಗಳು ಯಶಸ್ವಿನ ಯೋಜನೆಯಡಿ ಮಾ. 31 ರೊಳಗಾಗಿ ನೊಂದಾಯಿಸಿಕೊಂಡು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಚಂದ್ರಶೇಖರ್ ಕಲ್ಮನೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಕಾರ ಸಂಘಗಳನ್ನು ಹಾಗೂ ಯಶಸ್ವಿನಿ ಕೋ ಆರ್ಡಿನೇಟರ್ ಹರೀಶ್ – 9739588777 ಇವರನ್ನು ಸಂಪರ್ಕಿಸುವುದು.

ವಿ.ಸೂ.: ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್.ಡಿ. ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, Mar. 27: The Cooperation Department has asked beneficiaries to register under the Yashaswini scheme for the year 2024-25, with the last date being Mar 31. Deputy Registrar of Cooperative Societies Nagabhushan Chandrashekhar Kalmane has asked the members of the cooperative societies in the district to register under the Yashasvin scheme by March 31st and avail the benefits of the scheme. #yeshasvini health insurance scheme,

milk price hike | Nandini milk price hike: More burden on consumers! milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ! Previous post milk price hike | ನಂದಿನಿ ಹಾಲಿನ ದರ ಹೆಚ್ಚಳ : ಗ್ರಾಹಕರಿಗೆ ಮತ್ತಷ್ಟು ಹೊರೆ!
bengaluru | Bengaluru: What are the decisions taken in the state cabinet meeting? ಬೆಂಗಳೂರು : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು? Next post bengaluru | ಬೆಂಗಳೂರು : ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳೇನು?