
shimoga | ಶಿವಮೊಗ್ಗ | ಗುಲಾಬಿ ಹೂವು, ಶೈಕ್ಷಣಿಕ ಸಾಮಗ್ರಿ, ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಸ್ವಾಗತ ಕೋರಿದ ಮಹಿಳಾ ಅಧಿಕಾರಿ
ಶಿವಮೊಗ್ಗ (shivamogga), ಮೇ 30: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಮಾದರಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶುಕ್ರವಾರ ಶಾಲಾ ಪ್ರಾರಂಭೋತ್ಸವ ಸಮಾರಂಭ ಆಯೋಜಿಸಲಾಗಿತ್ತು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರೀತಿ ಅವರು ಶಾಲಾ ಮಕ್ಕಳಿಗೆ ಗುಲಾಬಿ ಹೂವು, ಶೈಕ್ಷಣಿಕ ಸಾಮಗ್ರಿ ಹಾಗೂ ಸಿಹಿ ವಿತರಿಸಿ ಮಕ್ಕಳಿಗೆ ಆತ್ಮೀಯ ಸ್ವಾಗತ ಕೋರಿದರು.
ಇದೇ ವೇಳೆ ಶಾಲೆಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಕೂಡ ಪ್ರೀತಿ ಅವರು ಟೇಪ್ ಕತ್ತರಿಸಿ ಉದ್ಘಾಟಿಸಿದರು. ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಸೋಮಿನಕೊಪ್ಪದ ಮಸೀದಿ ಸಮಿತಿ ಅಧ್ಯಕ್ಷರಾದ ಶಬ್ಬರ್ ಖಾನ್, ಜಿಲ್ಲಾ ಶೋಷಿತ ಸಮುದಾಯಗಳ ವೇದಿಕೆ ಜಿಲ್ಲಾಧ್ಯಕ್ಷರಾದ ಮಕ್ಬುಲ್ ಅಹ್ಮದ್, ಮುಖಂಡ ದಾದಾ ಖಲಂದರ್,
ಶಾಲೆಯ ಮುಖ್ಯೋಪಾಧ್ಯಾಯರಾದ ಕಿರಣ್ ಎಂ ಎ, ಶಿಕ್ಷಕರಾದ ಮಹಮ್ಮದ್ ಜಹೀರ್ ಅಬ್ಬಾಸ್, ನಾಗರಾಜ್, ಸಂತೋಷ್ ಕುಮಾರ್, ನೀಲಕಂಠಪ್ಪ ಮೊದಲಾದವರಿದ್ದರು.
Shivamogga, May 30: The school commencement ceremony was organized on Friday at the Maulana Azad Model Government English Medium School in Sominakoppa, on the outskirts of Shivamogga city. District Minority Welfare Department District Officer Preeti distributed roses, educational materials, and sweets to the school children and extended a warm welcome to the children.