rain news | ಶಿವಮೊಗ್ಗ, ಭದ್ರಾವತಿ ತಾಲೂಕುಗಳ ಅಂಗನವಾಡಿ, ಶಾಲೆಗಳಿಗೆ ಜು. 4 ರಂದು ರಜೆ ಘೋಷಣೆ!

Holiday declared for Anganwadi schools and colleges in Shivamogga and Bhadravati taluks on July 4 ಶಿವಮೊಗ್ಗ ಭದ್ರಾವತಿ ತಾಲೂಕುಗಳ ಅಂಗನವಾಡಿ ಶಾಲೆ – ಕಾಲೇಜುಗಳಿಗೆ ಜುಲೈ 4 ರಂದು ರಜೆ ಘೋಷಣೆ

ಶಿವಮೊಗ್ಗ (shimoga), ಜು. 3: ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜುಲೈ 4 ರ ಶುಕ್ರವಾರದಂದು ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಕುರಿತಂತೆ ಶಿವಮೊಗ್ಗ ತಹಶೀಲ್ದಾರ್ ವಿ ಎಸ್ ರಾಜೀವ್ ಹಾಗೂ ಭದ್ರಾವತಿ ತಹಶೀಲ್ದಾರ್ ಪರಶುರಾಮ್ ಅವರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕುಗಳ ವಿವಿಧೆಡೆ ಶುಕ್ರವಾರ ಬೆಳಿಗ್ಗೆಯಿಂದ ಮುಂಗಾರು ಮಳೆ ಚುರುಕುಗೊಂಡಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ತಾಲೂಕುಗಳ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲವಾಗಿದೆ.

Shimoga, Ju. 3: Due to the intensification of Monsoon rains, a holiday has been declared for Anganwadis, Primary and High Schools of Shimoga and Bhadravati Taluks on Friday, July 4.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →