
shimoga, soraba news | ಹಿಂದೂ – ಮುಸ್ಲಿಂ ಸಮಾಜಗಳ ಸೌಹಾರ್ದತೆಗೆ ವೇದಿಕೆಯಾದ ಶಿವಮೊಗ್ಗದ ಗಣೇಶೋತ್ಸವ, ಸೊರಬದ ಈದ್ ಮಿಲಾದ್ ಮೆರವಣಿಗೆ!
ಶಿವಮೊಗ್ಗ (shivamogga), ಸೆಪ್ಟೆಂಬರ್ 8: ಶಿವಮೊಗ್ಗ ನಗರದಲ್ಲಿ ನಡೆದ ಗಣೇಶಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಹಾಗೂ ಸೊರಬ ಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯು, ಹಿಂದೂ ಹಾಗೂ ಮುಸ್ಲಿಂ ಸಮಾಜಗಳ ನಡುವಿನ ಸೌಹಾದರ್ತೆ ಹಾಗೂ ಸಾಮರಸ್ಯಕ್ಕೆ ವೇದಿಕೆಯಾಗಿತ್ತು.
ಈ ಕುರಿತಂತೆ ಸೆಪ್ಟೆಂಬರ್ 8 ರಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎರಡೂ ಸಮಾಜಗಳ ನಡುವಿನ ಭಾವೈಕ್ಯತೆಗೆ ಸಾಕ್ಷಿಯಾದ ಘಟನೆಗಳ ಮಾಹಿತಿ ನೀಡಿದೆ. ವಿವರ ಮುಂದಿನಂತಿದೆ.
ಶಿವಮೊಗ್ಗ ವರದಿ : ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ, ಶನೇಶ್ವರ ದೇವಾಲಯದ ಗಣೇಶಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ಸೆಪ್ಟೆಂಬರ್ 7 ರ ಸಂಜೆ ನಡೆಯಿತು.
ಮೆರವಣಿಗೆಯು ಟಿಪ್ಪುನಗರ ಚಾನಲ್ ಬಳಿ ತೆರಳುತ್ತಿದ್ದ ವೇಳೆ, ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡರು ಮೆರವಣಿಗೆಯಲ್ಲಿದ್ದವರಿಗೆ ಪಾನೀಯ ವಿತರಣೆ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ.
ಸೊರಬ ವರದಿ : ಸೊರಬ ಪಟ್ಟಣದಲ್ಲಿ ಸೆಪ್ಟೆಂಬರ್ 8 ರಂದು ಈದ್ ಮಿಲಾದ್ ಹಬ್ಬದ ಅಂಗವಾಗಿ, ಮುಸ್ಲಿಂ ಸಮಾಜದವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯು ಪಟ್ಟಣದ ಪುರಸಭೆ ಸಮೀಪ ಆಗಮಿಸಿದ ವೇಳೆ, ಸ್ಥಳಿಯ ಹಿಂದೂ ಸಮಾಜದ ಮುಖಂಡರು ಮೆರವಣಿಗೆಯಲ್ಲಿದ್ದವರಿಗೆ ಪಾನೀಯ ಹಾಗೂ ಕುಡಿಯುವ ನೀರು ವಿತರಣೆ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.
Shivamogga, September 8: The Ganesh idol procession held in Shivamogga city and the Eid Milad procession held in Soraba town were a platform for harmony between the Hindu and Muslim communities.
In a statement issued by the district police department on September 8, it provided information about incidents that witnessed solidarity between the two communities. The details are as follows.